ಅಬುದಾಬಿ: ಐಪಿಎಲ್ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೊಲ್ಕೊತ್ತಾ ನೈಟ್ ರೈಡರ್ಸ್ಗೆ 196 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿತು.
ತಂಡದ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ನಾಯಕ ರೋಹಿತ್ ಶರ್ಮಾ ಜತೆಗೂಡಿ ಸೂರ್ಯಕುಮಾರ್ ಯಾದವ್ 90 ರನ್ಗಳ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 47 ರನ್ ಕಲೆಹಾಕಿದ್ದ ಯಾದವ್ ರನೌಟ್ ಆಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಬಳಿಕ ಬಂದ ಸೌರಭ್ ತಿವಾರಿಯು ಸಹ 21 ರನ್ಗಳ ಮಾಡಿ ಔಟ್ ಆದರು.
ರೋಹಿತ್ ಶರ್ಮಾ 6 ಸಿಕ್ಸರ್, 3 ಬೌಂಡರಿ ನೆರವಿನೊಂದಿಗೆ ಭರ್ಜರಿ 80 ರನ್ ಕಲೆಹಾಕುವ ತಂಡದ ರನ್ ಹೆಚ್ಚಿಸುವಲ್ಲಿ ನೆರವಾದರು . ಉಳಿದಂತೆ ಹಾರ್ದಿಕ್ ಪಾಂಡ್ಯ (18) ರನ್ ಗಳಿಸಿ ಔಟಾದರೆ, ಕೀರನ್ ಪೊಲಾರ್ಡ್ (11*) ಮತ್ತು ಕೃನಾಲ್ ಪಾಂಡ್ಯ (1*) ಅಜೇಯರಾಗಿ ಉಳಿದರು.ಕೊಲ್ಕೊತ್ತಾ ಪರ ಶಿವಮ್ ಮವಿ 2 ವಿಕೆಟ್ ಪಡೆದರೆ, ಸುನೀಲ್ ನರೇನ್ ಮತ್ತು ಆ್ಯಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.