ಹೊಸ ದಿಗಂತ ವರದಿ, ಮಡಿಕೇರಿ:
ವೃದ್ಧೆಯೊಬ್ಬರು ತೆರೆದ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದಿ.ಮುರುವಂಡ ಕಾರ್ಯಪ್ಪ ಅವರ ಪತ್ನಿ ಕಾಮಿ ಅಲಿಯಾಸ್ ಕಾಮವ್ವ(85) ಎಂಬವರೇ ಮೃತ ದುರ್ದೈವಿಯಾಗಿದ್ದಾರೆ.
ವೃದ್ಧೆಯ ಪುತ್ರ ದೇವಯ್ಯ ಅವರು ತಾಯಿ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಅನುಮಾನದಿಂದ ಮನೆಯ ಸಮೀಪದ ಗದ್ದೆಗೆ ಹೊಂದಿಕೊಂಡಂತಿರುವ ತೆರೆದ ಬಾವಿಯನ್ನು ನೋಡಿದಾಗ ಕಾಮವ್ವ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಪೊಲೀಸ್ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಕ್ರಮ ಕೈಗೊಂಡಿದ್ದಾರೆ.