Saturday, July 2, 2022

Latest Posts

ಕೋಕ್, ಪೆಪ್ಸಿಕೋ, ಪತಂಜಲಿ, ಬಿಸ್ಲೆರಿ ತಯಾರಕರಿಗೆ ದಂಡ ವಿಧಿಸಿದ ಸಿಪಿಸಿಬಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸದಿರುವ ಹಿನ್ನೆಲೆ ಕೋಕ್, ಪೆಪ್ಸಿಕೋ, ಪತಂಜಲಿ ಮತ್ತು ಬಿಸ್ಲೆರಿ ಸೇರಿದಂತೆ ವಿವಿಧ ಪಾನೀಯ ತಯಾರಕರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದಂಡ ವಿಧಿಸಿದೆ.
2018ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ, ಈ ಪಾನೀಯ ತಯಾರಕರಿಗೆ ಕೇಂದ್ರಗಳು ವಿಸ್ತರಿತ ಉತ್ಪಾದಕ ಹೊಣೆಗಾರಿಕೆಯನ್ನು (ಇಪಿಆರ್) ನಿಭಾಯಿಸಿಲ್ಲ ಎಂದು ಅಧ್ಯಕ್ಷ ಸಿಪಿಸಿಬಿ ಅಧ್ಯಕ್ಷ ಶಿವ್‌ದಾಸ್ ಮೀನಾ ಹೇಳಿದ್ದಾರೆ.
ಈ ನಿಯಮವನ್ನು ಉಲ್ಲಂಘಿಸಿರುವ ಹಿಂದೂಸ್ತಾನ್ ಕೋಕಾಕೋಲಾ ಪಾನೀಯಗಳಿಗೆ 50.66 ರೂ. ಕೋಟಿ, ಬಿಸ್ಲೆರಿ 10.75 ಕೋಟಿ ರೂ., ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ 8.7 ಕೋಟಿ ರೂ. ಮತ್ತು ಪತಂಜಲಿಗೆ 1 ಕೋಟಿ ರೂ. ದಂಡ ವಿಧಿಸಲಾಗಿದೆ.
ಇನ್ನು ಪರಿಹಾರದ ಶುಲ್ಕವಾಗಿ ಸಿಪಿಸಿಬಿಗೆ ದಂಡವನ್ನು ಪಾವತಿಸಲು ಈ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss