ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66ರ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿ ಹಾಗೂ ಸ್ಥಳಿಯರಿಗೆ ಸುಂಕ ವಿಧಿಸುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸ್ಥಳೀಯರ ಸಹಕಾರದೊಂದಿಗೆ ಬೃಹತ್ ಹೋರಾಟ ನಡೆಸಿ ಟೋಲ್ನಿಂದ ಸ್ಥಳಿಯರಿಗೆ ವಿನಾಯಿತಿ ದೊರಕಿಸಿತು.
ಅಲ್ಲದೆ ಕೆಲ ಭಾಗಗಳ ಸರ್ವಿಸ್ ರಸ್ತೆ ನಿರ್ಮಿಸಲು ಹೋರಾಟ ನಡೆಸಿ ಯಶಸ್ವಿಯಾಗಿತ್ತು. ಇದಿಗ ಮತ್ತೆ ಫಾಸ್ಟ್ಟ್ಯಾಗ್ ದಿಸೆಯಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ತೆಗೆದು ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಅಣಿಯಾಗಿದೆ. ಆದರೆ ಹೆದ್ದಾರಿ ಜಾಗೃತಿ ಸಮಿತಿ ಹಲವು ಬಾರಿ ಮನವಿ ನೀಡಿದರು ಫಾಸ್ಟ್ ಟ್ಯಾಗ್ ನಿಂದ ವಿನಾಯಿತಿಕೊಡಲು ಹಿಂಜರಿಯುವ ಮಾತು ಕೇಲಿಬರುತ್ತಿದೆ ಈ ದಿಸೆಯಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ಧಗೊಳಿಸಲು ಗುರುವಾರ ಸಾಸ್ತಾನದ ಶಿವಕೃಪಾ ಸಭಾಂಗಣದಲ್ಲಿ ಸ್ಥಳಿಯ ಜಿ.ಪಂ ವ್ಯಾಪ್ತಿಯ ಸಾರ್ವಜನಿಕರ ಸಭೆ ಕರೆದಿದೆ.
ಜನಪ್ರತಿನಿಧಿಗಳ ಬೆಂಬಲ?
2018ರಲ್ಲಿ ನಡೆದ ದೊಡ್ಡ ಮಟ್ಟದ ಹೋರಾಟವನ್ನು ಟೋಲ್ಗೇಟ್ ಬಳಿ ಹಮ್ಮಿಕೊಂಡಾಗ ಆ ಹೋರಾಟದಲ್ಲಿ ಭಾಗವಹಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ರಘುಪತಿ ಭಟ್ ಹಾಗೂ ಆಗಿನ ಪರಿಷತ್ ಸದಸ್ಯ ಪ್ರಸ್ತುತ ಸಚಿವರಾಗಿರುವ ಕೋಟ ಶ್ರೀನಿವಾಸ್ ಪೂಜಾರಿ ಸ್ಥಳೀಯ ಜನಪ್ರತಿನಿಧಿಗಳು ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯತಿ ಘೋಷಣೆ ಮಾಡಲಾಗಿತ್ತು.
ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಹಾಗೂ ಹೆದ್ದಾರಿ ಅಧಿಕಾರಿಗಳ ಸಮ್ಮುಖದಲ್ಲೇ ತೆಗೆದುಕೊಂಡ ಈ ನಿರ್ಣಯ ಜಾರಿಯಲ್ಲಿರುವಂತೆಯೇ ಇದೀಗ ಏಕಾಏಕಿ ಫೆಬ್ರವರಿ 15ರಿಂದ ಸ್ಥಳೀಯರು ಕೂಡ ಟೋಲ್ ಪಾವತಿಸಬೇಕು ಹಾಗೂ ಸ್ಥಳೀಯ ಎಲ್ಲಾ ವಿನಾಯತಿಗಳನ್ನು ರದ್ದುಗೊಳಿಸುವ ಬಗ್ಗೆ ಟೋಲ್ ಅಧಿಕಾರಿಗಳು ಸೂಚನೆಯ ಹಾಗೂ ಏಕಪಕ್ಷೀಯ ನಿರ್ಧಾರದ ಬಗ್ಗೆ ಹೆದ್ದಾರಿ ಜಾಗೃತಿ ಸಮಿತಿ ಇತ್ತೀಚಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಟೋಲ್ ಬಳಿ ತೆರಳಿ ಮನವಿ ಮಾಡಿಯೂ, ಪ್ರಯೋಜನ ಶೂನ್ಯವೆಂಬಂತ್ತಾಗಿದೆ. ಈ ಹಿನ್ನಲ್ಲೆಯಲ್ಲಿ ಮುಂದಿನ ಹೋರಾಟಕ್ಕೆ ಹೆದ್ದಾರಿ ಜಾಗೃತಿ ಸಮಿತಿಯೊಂದಿಗೆ ಜನಪ್ರತಿನಿಧಿಗಳ ಪ್ರಸ್ತುತ ಮೌನ ಸಾರ್ವಜನಿಕರ ಹುಬ್ಬೆರಿಸುವಂತೆ ಮಾಡಿದೆ.
ಕೋಟ ಟೋಲ್ಗೇಟ್ನಲ್ಲಿ ಟೋಲ್ ಪಾವತಿಗೆ ಸೂಚನೆ: ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ
ಹೊಸ ದಿಗಂತ ವರದಿ, ಕೋಟ: