ಕೊರೋನಾ ಕುರಿತು ಜನ ಜಾಗೃತಿ ಮೂಡಿಸಲು ಬಿಬಿಎಂಪಿಯಿಂದ ನೂತನ ಆ್ಯಪ್

0
115

ಬೆಂಗಳೂರು: ಕೊರೋನಾ ವೈರಸ್ ಕುರಿತು ಜನರಲ್ಲಿ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯಕ್ಕೆ ಸಂಬಂಧಿಸಿದ ಪಬ್ಲಿಕ್ ಹೆಲ್ತ್ ಎಪಿಡಮಲಾಜಿಕಲ್ ಇನ್ಫರ್ಮೆಷನ್ ಸೆಲ್ (ಪಿ.ಎಚ್.ಇ.ಐ.ಸಿ) ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲು ಮುಂದಾಗಿದೆ.

ಕೊರೋನಾ, ಕಾಲರಾ ಬಗ್ಗೆ ದಿನೇ ದಿನೇ ವದಂತಿಗಳು ಹೆಚ್ಚಾಗುತ್ತಲೇ ಇವೆ. ಯಾವ ರೋಗಕ್ಕೆ ಹೇಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜನರಲ್ಲಿ ಗೊಂದಲಗಳಿವೆ. ಹೀಗಾಗಿ ಜಾಗೃತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಪಾಲಿಕೆ ಪಿ.ಎಚ್.ಇ.ಐ.ಸಿ ಆ್ಯಪ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಪಿ.ಎಚ್.ಇ.ಐ.ಸಿ ಆ್ಯಪ್ ಏಪ್ರಿಲ್ ಆರಂಭದಲ್ಲಿ ಬಿಡುಗಡೆ ಆಗಲಿದೆ.

LEAVE A REPLY

Please enter your comment!
Please enter your name here