ವಾಷಿಂಗ್ಟನ್: ಕೋರೋನಾ ಮಹಾಮಾರಿ, ಪ್ರಪಂಚದ ದೊಡ್ಡಣ್ಣನ ಜಂಘಾಬಲವನ್ನೇ ಅಲುಗಾಡಿಸಿದ್ದು ಡೋನಾಲ್ಡ್ ಟ್ರಂಪ್, ಇತರ ದೇಶಗಳ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸುವ ದಟ್ಟ ಸಾಧ್ಯತೆಗಳಿವೆ,
ಕಳೆದ ಎರಡು, ಮೂರು ದಿನಗಳಲ್ಲಿ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿ ಕೋರೋನಾ ರುದ್ರ ತಾಂಡವಕ್ಕೆ ಸಾವಿರಾರು ಮಂದಿ ಬಲಿಯಾಗಿರುವುದು ಟ್ರಂಪ್ ಆತ್ಮವಿಶ್ವಾಸವನ್ನೇ ಕುಗ್ಗಿಸಿದಂತಿದೆ.
ಅನಿವಾಸಿಗಳಿಗೆ ನೀಡುವ ವೀಸಾ ಹಾಗೂ ಈಗಾಗಲೇ ಅಲ್ಲಿ ವಾಸಿಸಿರುವ ನಾನಾ ದೇಶಗಳ ಪೌರರ ಖಾಯಂ ಪೌರತ್ವ ಅಲ್ಲದೆ, ಪ್ರಪಂಚದ ಕೆಲ ದೇಶಗಳಿಗೆ ಲಭ್ಯವಿರುವ ಅಮೆರಿಕ ನೆರವು- ಇತ್ಯಾದಿ ಎಲ್ಲ ಪ್ರಮುಖ ವಿಷಯಗಳಲ್ಲಿ ಅಮೆರಿಕ ಭವಿಷ್ಯದಲ್ಲಿ ಬಿಗಿ ನಿಲುವು ತಾಳುವ ಸಾಧ್ಯತೆ ಇದೆ. ಅಮೆರಿಕ ದೇಶಕ್ಕೆ ಪ್ರಸ್ತುತ ಬಂದೊಂದಗಿರುವ ವಿಪ್ಪತ್ತಿಂದ ಪಾರಾಗುವ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಹಿಂದೆಂದೂ ಕಾಣದಂತಹ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವುದಂತೂ ಖಂಡಿತ ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಚೀನಾ ವಿಷಯದಲ್ಲಿ ವಿಶ್ವ ಸಂಸ್ಥೆ ಕೂಡಾ ಏಕಪಕ್ಷೀಯವಾಗಿದೆ ಎಂದು ಅಮೆರಿಕ ಈಗಾಗಲೇ ಕಿಡಿಕಾರಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ- ಚೀನಾ ನಡುವಣ ಸಂಬಂಧಗಳೂ ಹೇಗಿರುತ್ತೆ ಎಂಬುದು ಪ್ರಶ್ನಾರ್ಹವಾಗಿದೆ.