Monday, July 4, 2022

Latest Posts

ಕೊರೋನಾ ಮಹಾ ಮಾರಿ ಹೊಡೆದೋಡಿಸಲು 9 ನಿಮಿಷಗಳ ಕಾಲ ದೇಶವನ್ನು ಬೆಳಗೋಣ: ಮೋದಿ ಕರೆ

ಹೊಸದಿಲ್ಲಿ: ಏಪ್ರಿಲ್ 5ರಂದು ರಾತ್ರಿ 9:00 ಗಂಟೆಗೆ 9 ನಿಮಿಷಗಳ ಕಾಲ ಉರಿಯುವ ದೀಪಗಳನ್ನು ನಂದಿಸಿ ದೇಶವ್ಯಾಪಿಯಾಗಿ ಮನೆಮನೆಗಳಲ್ಲಿ ಹಣತೆಗಳನ್ನು ಉರಿಸಿ ದೇಶವನ್ನು ಬೆಳಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ಇಂದು (ಶುಕ್ರವಾರ) ಬೆಳಗ್ಗೆ 9 ಗಂಟೆಗೆ ದೇಶದ ಜನತೆಗಾಗಿ ವಿಡಿಯೋ ಸಂದೇಶ ನೀಡಿದ್ದು ಕೊರೋನಾ ವಿರುದ್ಧ ಜೊತೆಯಾಗಿ ಹೊರಡೋಣ ಎಂದಿದ್ದಾರೆ.

ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್​ ಆರಿಸಿ, ಹಣತೆ, ಮೊಬೈಲ್​ ಟಾರ್ಚ್​ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು, ದೇಶದಲ್ಲಿ ಎಲ್ಲರೂ ಒಂದುಗೂಡಿದರೆ ಕೊರೊನಾ ವಿರುದ್ಧ ಹೋರಾಟ ಸಾಧ್ಯ, ಜನತಾ ರೂಪದಲ್ಲಿ ಮಹಾ ಶಕ್ತಿಯ ವಿರಾಟ ರೂಪದ ಸಾಕ್ಷಾತ್ಕಾರವಾಗಬೇಕಿದೆ, ಕೊರೊನಾ ಎಂಬ ಅಂಧಕಾರದಿಂದ ಪ್ರಕಾಶದೆಡೆಗೆ ಹೋಗಬೇಕು. ದೇಶದಲ್ಲಿ ಯಾರೂ ಕೂಡ ಒಂಟಿ ಅಲ್ಲ, ದೇಶದ 130 ಕೋಟಿ ಜನರು ಒಂದೇ ಸಂಕಲ್ಪ ತೊಟ್ಟಿದ್ದಾರೆ, ಕೊರೊನಾವನ್ನು ಮಟ್ಟ ಹಾಕಲು ಸಾಮಾಜಿಕ ಅಂತರವೇ ರಾಮಬಾಣ. ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್​ ಆರಿಸಿ, ಹಣತೆ, ಮೊಬೈಲ್​ ಟಾರ್ಚ್​ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ, ಕೊರೋನಾ ವೈರಸ್​ ನಿಯಂತ್ರಣಕ್ಕಾಗಿ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್ ಮಾಡಿ ಆದೇಶ ಹೊರಡಿಸಿದ್ದರು. ಮಾತ್ರವಲ್ಲದೆ ಈ ಕ್ವಾರಂಟೈನ್ ಅವಧಿಯ ಸಮರ್ಪಕ ಬಳಕೆಗೆ ಪ್ರಧಾನಿ ಮೋದಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss