Sunday, June 26, 2022

Latest Posts

ಕೋಲಾರದಲ್ಲಿ ಇಂದು 20 ಮಂದಿಗೆ ಸೋಂಕು, 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

ಕೋಲಾರ: ಜಿಲ್ಲೆಯಲ್ಲಿ ಕೊರೋನ ಆತಂಕ ಮುಂದುವರೆದಿದ್ದು ಭಾನುವಾರ  ೨೦ ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ೨೮೭ ಕ್ಕೇರಿದೆ.
ಕೋಲಾರ ತಾಲ್ಲೂಕಿನಲ್ಲಿ ೧೧ ಪ್ರಕರಣ,ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ತಲಾ ೩, ಕೆಜಿಎಫ್-೨, ಶ್ರೀನಿವಾಸಪುರದಲ್ಲಿ ಒಂದು ಪ್ರಕರಣ ವರದಿಯಾಗಿದೆ.
ಕೋಲಾರದ ಕಂಟೈನ್‌ಮೆಂಟ್ ಝೋನ್‌ನಿಂದ ೩೦ ವರ್ಷದ ಪುರುಷ, ೨೫ ವರ್ಷದ ಮಹಿಳೆ, ೨೬ ವರ್ಷದ ಮಹಿಳೆ, ೩೫ ವರ್ಷದ ಮಹಿಳೆ, ಪಿ.೬೯೦೭ ಸಂಪರ್ಕದಿಂದ ೩೩ ವರ್ಷದ ಮಹಿಳೆ,  ಪಿ.೧೬೭೬೧ ಸಂಪರ್ಕದಿಂದ ೩೮ ವರ್ಷದ ಪುರುಷ, ಪಿ.೧೮೦೮೯ ಸಂಪರ್ಕದಿಂದ ೨೫ ವರ್ಷದ ಮಹಿಳೆ, ೪೮ ವರ್ಷದ ಮಹಿಳೆ, ೨೧ ವರ್ಷದ ಪುರುಷ, ಉಸಿರಾಟದ ತೊಂದರೆಯಿಂದ ೨೯ ವರ್ಷದ ಪುರುಷ, ೨೦ ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನಲ್ಲಿ ಪಿ.೧೪೪೩೩ ಸಂಪರ್ಕದಿಂದ ೪೭ ವರ್ಷದ ಪುರುಷ, ಉಸಿರಾಟದ ತೊಂದರೆಯಿಂದ ೧೧ ವರ್ಷದ ಬಾಲಕ, ೪೭ ವರ್ಷದ ಪುರುಷ ಸೋಂಕಿತರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನಲ್ಲಿ ಉಸಿರಾಟದ ತೊಂದರೆಯಿಂದ ೫೨ ವರ್ಷದ ಮಹಿಳೆ, ಅಂತರ ಜಿಲ್ಲಾ ಪ್ರಯಾಣದಿಂದ ೪೧ ವರ್ಷದ ಪುರುಷ, ೨೭ ವರ್ಷದ ಆರೋಗ್ಯ ಕಾರ್ಯಕರ್ತೆ ಸೋಂಕಿತರಾಗಿದ್ದಾರೆ.
ಕೆಜಿಎಫ್‌ನಲ್ಲಿ ಉಸಿರಾಟದ ತೊಂದರೆಯಿಂದ ೨೨ ವರ್ಷದ ಪುರುಷ, ಪಿ.೧೯೭೯೬ ಸಂಪರ್ಕದಿಂದ ೪೮ ವರ್ಷದ ಮಹಿಳೆ ಹಾಗೂ ಶ್ರೀನಿವಾಸಪುರದಲ್ಲಿ ಉಸಿರಾಟದ ತೊಂದರೆಯಿಂದ ೫೮ ವರ್ಷದ ಮಹಿಳೆ ಸೋಂಕಿತರಾಗಿದ್ದು, ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಇಂದು ೭ ಜನ ಸೇರಿದಂತೆ ಈವರೆಗೂ ೧೨೪ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಗಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೧೫೯ ಆಗಿದೆ. ತುರ್ತು ನಿಗಾ ಘಟಕದಲ್ಲಿ ೧೧ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತು ಸಾವು ಸಂಭವಿಸಿದ ನಂತರ ಎರಡು ಪ್ರಕರಣಗಳಲ್ಲಿ ಪಾಸಿಟಿವ್ ಎಂದು ದಾಖಲಾಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೩೫೬೫ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೧೬೮೩೬ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೧೪೮೫೮ ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ.
ಕೋಲಾರದಿಂದ ಪಿ.೮೦೬೦, ಮಾಲೂರಿನಲ್ಲಿ ಪಿ.೧೩೨೬೨, ಪಿ.೨೭೦೨೪, ಕೆಜಿಎಫ್‌ನಲ್ಲಿ ಪಿ.೧೯೭೯೦, ಪಿ.೨೧೬೫೪, ಮುಳಬಾಗಿಲಿನಲ್ಲಿ ಪಿ.೨೩೫೪೫, ಶ್ರೀನಿವಾಸಪುರದಲ್ಲಿ ಪಿ.೧೯೭೯೯ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss