ಕೋಲಾರ: ಜಿಲ್ಲೆಯಲ್ಲಿ ಕೊರೋನ ಆತಂಕ ಮುಂದುವರೆದಿದ್ದು ಇಂದು ೩೭ ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ೩೬೫ ಕ್ಕೇರಿದೆ.
ಕೋಲಾರ ತಾಲ್ಲೂಕಿನಲ್ಲಿ ೧೩ ಪ್ರಕರಣ, ಶ್ರೀನಿವಾಸಪುರ ೧೨, ಬಂಗಾರಪೇಟೆ ಮತ್ತು ಮುಳಬಾಗಿಲು ತಲಾ ೬೬ ಪ್ರರಕರಣ ವರದಿಯಾಗಿದ್ದು, ಎಲ್ಲರೂ
ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಇಂದು ೮ ಮಂದಿ ಸೇರಿದಂತೆ ಈವರೆಗೂ ೧೪೩ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಗಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೨೧೮ ಆಗಿದೆ. ತುರ್ತು ನಿಗಾ ಘಟಕದಲ್ಲಿ ೧೩ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತು ಸಾವು ಸಂಭವಿಸಿದ ನಂತರ ಎರಡು ಪ್ರಕರಣಗಳಲ್ಲಿ ಪಾಸಿಟೀವ್ ಎಂದು ದಾಖಲಾಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೪೩೪೬ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೧೭೪೯೦ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೧೫೮೦೫ ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ.
ಬಿಡುಗಡೆಯದವರಲ್ಲಿ ಕೋಲಾರದಿಂದ ಪಿ ೨೭೦೨೬, ಪಿ.೨೭೦೨೯, ಪಿ.೨೭೦೨೮,ಪಿ.೨೭೦೨೭, ಪಿ.೨೭೦೨೫, ಕೆಜಿಎಫ್ ನಲ್ಲಿ ಪಿ.೨೯೭೧೩, ಪಿ.೨೯೧೫೨, ಶ್ರೀನಿವಾಸಪುರದಲ್ಲಿ ಪಿ.೨೭೦೩೦ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.