Friday, August 12, 2022

Latest Posts

ಕೋಲಾರದಲ್ಲಿ ಜಿಲ್ಲೆಯಲ್ಲಿ ಶುಕ್ರವಾರ 31 ಮಂದಿಗೆ ಪಾಸಿಟಿವ್, 45 ಮಂದಿ ಗುಣಮುಖ

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ೩೧ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ೧೩೨೦ ಕ್ಕೆ ಏರಿದೆ. ಇದೇ ದಿನ ೪೫ ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಎಲ್ಲರೂ ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯ ಹಾಗೂ ಇಂದಿನಿಂದ  ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿರುವ ಹಾಸ್ಟೆಲ್ ಕಟ್ಟಗಳಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಕೋಲಾರ ತಾಲೂಕಿನಲ್ಲಿ ೧೫, ಮಾಲೂರು ೧, ಬಂಗಾರಪೇಟೆ ೨, ಕೆಜಿಎಫ್‌ನಲ್ಲಿ ೭, ಮುಳಬಾಗಿಲಿನಲ್ಲಿ ೫ ಹಾಗೂ ಶ್ರೀನಿವಾಸಪುರದಲ್ಲಿ ೧ ಪಾಸಿಟಿವ್ ಪ್ರಕರಣ ವರದಿಯಾಗಿದೆ.
ಇಂದು ೪೫ ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಹೊಂದಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ ೫೧೨ ಆಗಿದೆ.
ಕೋಲಾರ ತಾಲೂಕಿನಿಂದ ೩, ಮಾಲೂರು ೨, ಬಂಗಾರಪೇಟೆ ೨, ಕೆಜಿಎಫ್‌ನಿಂದ ೧, ಮುಳಬಾಗಿಲಿನಿಂದ ೫, ಶ್ರೀನಿವಾಸಪುರದಿಂದ ೧ ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೭೮೩ ಆಗಿದೆ. ತುರ್ತು ನಿಗಾ ಘಟಕದಲ್ಲಿ ೨೭ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಯಾರೂ ಸಾವನ್ನಪ್ಪಿಲ್ಲ, ಒಟ್ಟು ಈವರೆಗೂ ಸತ್ತವರ ಸಂಖ್ಯೆ ೨೫ಆಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೧೧೮೯೨  ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೨೫೧೦೮ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೨೩೬೦೮ ಮಾದರಿಗಳು ನೆಗಟಿವ್ ಎಂದು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss