Wednesday, August 17, 2022

Latest Posts

ಕೋಲಾರದಲ್ಲಿ ಮತ್ತೆ ಮೂವರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆ

ಕೋಲಾರ: ನಗರದ ವಿವಿಧೆಡೆ ಕೊರೋನಾ ಸೋಂಕಿನ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೪೪ಕ್ಕೇರಿದಂತಾಗಿದೆ.
ಅದರಂತೆ ನಗರದ ಷಾಹೀನ್‌ಷಾ ನಗರದ ವಾಸಿ ಆಟೋ ಚಾಲಕ (೪೦) ಎಂಬಾತನಿಗೆ ಸೋಂಕು ಖಚಿತವಾಗಿದೆ. ಜತೆಗೆ ನಗರದ ಪಿಡಬ್ಲ್ಯೂಡಿ ಕ್ವಾರ್ಟರ್ಸ್‌ನ ಮತ್ತೋರ್ವ ವ್ಯಕ್ತಿಗೂ (೩೯) ಕೊರೋನಾ ಸೋಂಕು ಪತ್ತೆಯಾಗಿದೆ.
ಹಾಗೆಯೇ ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರದ ಸಮೀಪ ಅರಹಳ್ಳಿ ಗೇಟ್ ನಿವಾಸಿ ಕಾರ್ಮಿಕ(೨೨) ಎಂಬಾತನಿಗೂ ಸೋಂಕು ದೃಢಪಟ್ಟಿದ್ದು, ಈತ ಮಧ್ಯಪ್ರದೇಶದಿಂದ ಹಿಂದಿರುಗಿದ್ದ ಖಾಸಗಿ ಇಟ್ಟಿಗೆ ಕಾರ್ಖಾನೆ ನೌಕರ ಎನ್ನಲಾಗಿದ್ದು, ಈತ ಹಲವಾರು ಮಂದಿಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಈ ಮೂವರನ್ನು ನಗರದ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರ ಸಂಖ್ಯೆ ೪೪ಕ್ಕೆ ಏರಿಕೆ
ಇದರಿಂದ ಕೋಲಾರ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ೪೪ ಕ್ಕೇರಿದ್ದು, ಗುಣಮುಖರಾಗಿ ೨೬ ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದಂತೆ ೧೮ ಸಕ್ರಿಯ ಪ್ರಕರಣಗಳು ಚಿಕಿತ್ಸೆ ಹಂತದಲ್ಲಿ ಆಸ್ಪತ್ರೆಯಲ್ಲಿರುವಂತಾಗಿದೆ.
ತಾಲೂಕುವಾರು ಸೋಂಕಿತರದಲ್ಲಿ ಕೋಲಾರದಿಂದ ೧೧, ಮಾಲೂರಿನಲ್ಲಿ ೩, ಬಂಗಾರಪೇಟೆಯಲ್ಲಿ ೧೦, ಕೆಜಿಎಫ್‌ನಿಂದ ೪, ಮುಳಬಾಗಿಲಿನಿಂದ ೧೦ ಹಾಗೂ ಶ್ರೀನಿವಾಸಪುರದಿಂದ ೬  ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಪ್ರಸ್ತುತ ಮುಳಬಾಗಿಲು ಹೊರತುಪಡಿಸಿ ಕೋಲಾರ ಜಿಲ್ಲೆಯ ಎಲ್ಲಾ  ಐದು ತಾಲೂಕುಗಳಲ್ಲಿಯೂ ಸೋಂಕಿತರು ಇದ್ದಂತಾಗಿದೆ.
ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ನಗರದ ಪಿಡಬ್ಲ್ಯೂಡಿ ಕ್ವಾರ್ಟರ್ಸ್, ರಹಮತ್ ನಗರ, ಷಾಹೀನ್‌ಷಾ ನಗರಗಳ ಸೋಂಕಿತರು ವಾಸಿಸುತ್ತಿದ್ದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಸೀಲ್‌ಡೌನ್ ಪ್ರದೇಶಗಳಿಗೆ ನಗರಸಭೆ ಆಯುಕ್ತ ಶ್ರೀಕಾಂತ್ ಭೇಟಿ ನೀಡಿ ನಾಗರೀಕರಿಗೆ ಅಗತ್ಯ ವಸ್ತುಗಳ ಸರಬರಾಜಿಗೆ ಅನುಕೂಲವಾಗುವಂತೆ ಸ್ವಯಂಸೇವಕರನ್ನು ನೇಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!