ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋಲಾರದಲ್ಲಿ 69 ಮಂದಿಗೆ ಪಾಸಿಟಿವ್, 33 ಮಂದಿ ಗುಣಮುಖ

ಕೋಲಾರ: ಜಿಲ್ಲೆಯಲ್ಲಿ ಕೊರೋನಾ ಆತಂಕ ಮುಂದುವರೆದಿದ್ದು ಇಂದು  ಒಂದೇ ದಿನ ೬೯ ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೮೬೨ ಕ್ಕೇರಿದೆ.
ಇಂದು ಕೋಲಾರ ತಾಲ್ಲೂಕಿನಲ್ಲಿ೩೨ ಪ್ರಕರಣ, ಮಾಲೂರು ೧೩ ಬಂಗಾರಪೇಟೆ ೯, ಕೆಜಿಎಫ್ ೪, ಮುಳಬಾಗಿಲು ೮,  ಶ್ರೀನಿವಾಸಪುರ ೩  ಪ್ರಕರಣ ವರದಿಯಾಗಿದ್ದು,ಎಲ್ಲರೂ ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಇಂದು ೩೩ ಮಂದಿ ಗುಣಮುಖರಾಗಿ ಬಿಡುಗಡೆಯಾಗುವ ಮೂಲಕ ಈವರೆಗೂ ಒಟ್ಟು ಬಿಡುಗಡೆಯಾದವರ ಸಂಖ್ಯೆ ೩೫೩ ಆಗಿದೆ. ಬಿಡುಗಡೆಯಾದವರಲ್ಲಿ ಕೋಲಾರದಿಂದ ೨೧, ಮಾಲೂರಿನಿಂದ ೪, ಬಂಗಾರಪೇಟೆಯಿಂದ ೨ , ಕೆಜಿಎಫ್‌ನಿಂದ ೨, ಮುಳಬಾಗಿಲಿನಿಂದ ೨, ಶ್ರೀನಿವಾಸಪುರದಿಂದ ಇಬ್ಬರು ಗುಣಮುಖಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೪೮೯ ಆಗಿದೆ. ತುರ್ತು ನಿಗಾ ಘಟಕದಲ್ಲಿ ೧೮ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕುವಾರು ಸಕ್ರಿಯ ಪ್ರಕರಣಗಳ ವಿವರ ಇಂತಿದೆ.
ಕೋಲಾರದಲ್ಲಿ ೧೯೬, ಮಾಲೂರು ೮೦, ಬಂಗಾರಪೇಟೆ ೬೬, ಕೆಜಿಎಫ್ ೫೩, ಮುಳಬಾಗಿಲು ತಲಾ ೫೭, ಶ್ರೀನಿವಾಸಪುರ ೩೭ ಮಂದಿ ಆಸ್ಪತ್ರೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೮೨೪೦ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೨೧೯೮೩ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೧೯೫೨೭ ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss