Wednesday, August 10, 2022

Latest Posts

ಕೋಲಾರದಿಂದ ಕೊರೋನಾ ಪಾಸಿಟಿವ್ ವ್ಯಕ್ತಿ ನಿಗೂಢ ನಾಪತ್ತೆ: ಸೋಂಕಿತನ ಪತ್ತೆಗೆ ತಂಡ ರಚನೆ

ಕೋಲಾರ: ಕೊರೋನಾ ಪಾಸಿಟಿವ್ ವರದಿ ತಿಳಿದ ಬಳಿಕ ಚಿಕಿತ್ಸೆ ಪಡೆಯದೆ ತಪ್ಪಿಸಿಕೊಂಡಿರುವ ಸೋಂಕಿತನ ಪತ್ತೆ ಕಾರ್ಯ ಆಡಳಿತಕ್ಕೆ ಈಗ ಹೊಸ ತಲೆನೋವಾಗಿದ್ದು, ಈ ವ್ಯಕ್ತಿಯ ಪತ್ತೆಗಾಗಿ 10 ಮಂದಿ ಪೊಲೀಸರ ತಂಡ ರಚಿಸಲಾಗಿದೆ.
ಮಂಡ್ಯ ಮೂಲದವರು ಎನ್ನಲಾದ ಈ ವ್ಯಕ್ತಿ ಕೋಲಾರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಪರೀಕ್ಷೆ ನಡೆಸಿದಾಗ ಆತನಲ್ಲಿ ಪಾಸಿಟಿವ್‌ ಕಂಡುಬಂದಿತ್ತು. ಅದಾದ ಬಳಿಕ ಆತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗದೆ ತಲೆಮರೆಸಿಕೊಂಡಿದ್ದಾನೆ. ಆರೋಗ್ಯಾಧಿಕಾರಿಗಳು ಖುದ್ದಾಗಿ ಕರೆ ಮಾಡಿದ್ದು ಈವೇಳೆ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಆತಂಕಗೊಂಡ ಅವರು ಪೊಲೀಸರಿಗೆ ದೂರು ನೀಡಿದ್ದರು.
ಈನಡುವೆ ನಾಪತ್ತೆಯಾಗಿರುವ ರೋಗಿ, ಜೂ.2 ರಂದು ಬಂಗಾರಪೇಟೆ, ಜೂ.3 ರಂದು ಕೋಲಾರದಲ್ಲಿ ಕಾಣಿಸಿಕೊಂಡಿದ್ದ ಎಂದು ಹೇಳಲಾಗಿದ್ದು ಇದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಘಟನೆಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾಧಿಕಾರಿ ಸತ್ಯಾಭಾಮಾ, ಎಸ್ ಪಿ ಕಾರ್ತಿಕ್ ನೇತೃತ್ವದಲ್ಲಿ ಸಭೆ ನಡೆಸಿ, ಆತನ ಸಹೋದರಿಯಿಂದ ಫೋಟೋ ಸಂಗ್ರಹಿಸಿದ್ದು, ಪತ್ತೆಗಾಗಿ ತಂಡ ರಚಿಸಲಾಗಿದೆ. ಜೊತೆಗೆ ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪೊಲೀಸರಿಗೂ ಮಾಹಿತಿ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss