Tuesday, July 5, 2022

Latest Posts

ಕೋಲಾರದ ವಿಕಾಸ್ ಮತ್ತು ವಿಶ್ವಾಸ್‌ಗೆ ರಾಷ್ಟ್ರೀಯ ಆರ್ಕಿಟೆಕ್ ಪ್ರಶಸ್ತಿ

ಹೊಸದಿಗಂತ ವರದಿ,ಕೋಲಾರ:

ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಅರ್ಕಿಟೆಕ್ ವಿನ್ಯಾಸಕ್ಕೆ ನೀಡುವ ಪ್ರಶಸ್ತಿಗೆ ನಗರದ ಯುವ ಇಂಜಿನಿಯರ್ ಎಂ.ವಿ.ವಿಕಾಸ್ ಭಾಜನರಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಬೆಂಗಳೂರಿನ ಕ್ರಿಸ್ಟ್ ಆರ್ಕಿಟೆಕ್ಟ್ಸ್‌ನ ಯುವ ಇಂಜಿನಿಯರ್‌ರವರಿಗೆ ನ್ಯಾಷನಲ್ ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಜೈನ್ ಎಕ್ಸ್‌ಲೆನ್ಸ್ ಅವಾರ್ಡ್ ೨೦೨೦ ಗ್ಲೋಬಲ್ ಎಡಿಷನ್ ರವರು ಮತ್ತು ರೀಜನಲ್ ಸೌತ್ ಟಾಪ್ ಆರ್ಕಿಟೆಕ್ಟ್ಸ್ ಸಿ.ಡಬ್ಲ್ಯೂ.ಎ.ಬಿ ೨೦೨೦ ಅವಾರ್ಡ್‌ಗೆ ಇವರು ತನ್ನ ಇಂಜಿನಿಯರ್ ಮಿತ್ರರೊಂದಿಗೆ ಪಡೆದುಕೊಂಡಿದ್ದಾರೆ.

ಕೋಲಾರ ಕಠಾರಿಪಾಳ್ಯದ ನಿವಾಸಿಗಳಾದ ಮಂಜುಳ ಮತ್ತು ವೆಂಕಟೇಶ್ ದಂಪತಿಗಳ ಮಗನಾದ ಆರ್ಕಿಟೆಕ್ಟ್ ಎಂ.ವಿ.ವಿಕಾಸ್ ಮತ್ತು ಬೆಂಗಳೂರಿನ ಕಲ್ಯಾಣ ನಗರದ ನಿವಾಸಿಗಳಾದ ಹೇಮಾವತಿ ವೆಂಕಟರಾಮರೆಡ್ಡಿ ರವರ ಮಗನಾದ ಆರ್ಕಿಟೆಕ್ಟ್ ವಿಶ್ವಾಸ್ ವೆಂಕಟ್ ಇವರು ಎಂ.ಎಸ್ ರಾಮಯ್ಯ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರಿನಲ್ಲಿ ಪದವಿ ಪಡೆದು ಸ್ವಂತವಾಗಿ ಕ್ರಿಸ್ಟ್ ಆರ್ಕಿಟೆಕ್ಟ್ ಫರ‍್ಮ್‌ನ್ನು ಪ್ರಾರಂಭಿಸಿದ್ದರು. ವಾಸದ ಮನೆಗಳಿಗೆ, ವ್ಯಾಪಾರ ಮಳಿಗೆಗಳಿಗೆ, ವಿದ್ಯಾ ಸಂಸ್ಥೆಗಳಿಗೆ, ಆಸ್ಪತ್ರೆಗಳಿಗೆ ಆರ್ಚಿಟೆಕ್ಟ್ ಮತ್ತು ಇಂಟೀರಿಯರ್ ಡಿಸೈನ್ ಪ್ರಾಜೆಕ್ಟ್‌ಗಳನ್ನು ನೂತನ ವೈವಿಧ್ಯಮಯ ನಕ್ಷೆಗಳನ್ನು ಮತ್ತು ಡಿಸೈನ್‌ಗಳನ್ನು ತಯಾರಿಸಿ ಕೊಡುತ್ತಿದ್ದರು.

ಇವರ  ಫರ‍್ಮ್‌ನಿಂದ ಆರ್ಕಿಟೆಕ್ಟ್ಸ್ ನ್ಯಾಷನಲ್ ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್ ಅವಾರ್ಡ್ ೨೦೨೦ನಲ್ಲಿ ಭಾಗವಹಿಸಿ ತಾವು ತಯಾರಿಸಿದ ಆರ್ಕಿಟೆಕ್ಟ್ ಮತ್ತು ಇಂಟೀರಿಯರ್ ಡಿಸೈನ್‌ಗಳನ್ನು ಮಂಡಿಸಿ ಅತ್ಯುತ್ತಮ ಪ್ರಶಸ್ತಿ ಪಡೆದು ಪುರಸ್ಕಾರಗೊಂಡಿದ್ದಾರೆ.
ಇದು ಭಾರತ ದೇಶದ ರಾಷ್ಟ್ರೀಯ ಅವಾರ್ಡ್ ಆಗಿದ್ದು, ಇವರಿಂದ ಕರ್ನಾಟಕಕ್ಕೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇವರನ್ನು ಇಂಡಿಯಾ ೨೦೨೦ ಬೆಂಗಳೂರಿನ ಲೀಡಿಂಗ್ ಆರ್ಕಿಟೆಕ್ಟ್ ಮತ್ತು ಇಂಟೀರಿಯರ್ ಡಿಸೈನ್ ಎಂದು ಪರಿಗಣಿಸಲಾಗಿದೆ. ಹಾಗೂ ಈಗಾಗಲೇ ರೀಜಿನಲ್ ಸೌಥ್ ಆಫ್ ಟಾಪ್ ಆರ್ಕಿಟೆಕ್ಟ್ಸ್ ಸಿ.ಡೂಬ್ಲ್ಯೂ.ಎ.ಬಿ ೨೦೨೦ ಮುಂಬೈನಿಂದ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss