ಕೋಲಾರ: ತಾಲೂಕಿನ ಶಿಲ್ಲೆಂಗೆರೆ ಗ್ರಾಮದಲ್ಲಿ ಬೆಂಗಳೂರಿನ ಪಾದರಾಯಪುರದವರೆನ್ನಲಾದ ನಾಲ್ವರು ಪತ್ತೆಯಾಗಿದ್ದು, ಜತೆಗೆ ಬೆಂಗಳೂರಿನ ಬೇರೆಡೆಯಿಂದ ಆಗಮಿಸಿರುವ ಮೂವರು ಸೇರಿದಂತೆ ಏಳು ಮಂದಿಯ ಆರೋಗ್ಯ ತಪಾಸಣೆಗೆ ವೈದ್ಯರು ಮುಂದಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ಸೋಮವಾರ ಸಂಜೆ ಪಾದರಾಯಪುರದಿಂದ ಗ್ರಾಮಕ್ಕೆ ಆಗಮಿಸಿದ್ದರೆನ್ನಲಾದ ನಾಲ್ವರು ಹಾಗೂ ಇತರೆ ಮೂವರ ಆರೋಗ್ಯ ತಪಾಸಣೆಯನ್ನು ವೈದ್ಯರು ನಡೆಸಿದ್ದು ಯಾರಲ್ಲೂ ಕರೋನಾ ಪ್ರಾಥಮಿಕ ಲಕ್ಷಣಗಳು ಇಲ್ಲವೆಂದು ಸ್ವಷ್ಟಪಡಿಸಿದ್ದಾರೆ. ಈ ಏಳು ಮಂದಿ ಕೆಲಸಕ್ಕೆಂದು ಹೋಗಿದ್ದವರು ಎನ್ನಲಾಗಿದ್ದು, ಇದೀಗ ಗ್ರಾಮಕ್ಕೆ ವಾಪಸ್ಸಾಗಿದ್ದು, ಅವರನ್ನು ಹೋಂ ಕ್ವಾರೆಂಟೈನ್ನಲ್ಲಿಡಲಾಗಿದೆ ಎನ್ನಲಾಗಿದೆ.