Friday, July 1, 2022

Latest Posts

ಕೋಲಾರ| ಎಸ್ಸೆಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಗೆ 19785 ಮಂದಿ ಹಾಜರ್ , 687 ಮಂದಿ ಗೈರು

ಕೋಲಾರ: ಕೋವಿಡ್ ಆತಂಕದ ನಡುವೆ ಆರಂಭವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ 4ನೇ ದಿನ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯೂ ಯಶಸ್ವಿಯಾಗಿ ನಡೆದಿದ್ದು, ಇಂದು ೬೮೭ ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು.
ಪರೀಕ್ಷಾ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯ 70 ಪರೀಕ್ಷಾ ಕೇಂದ್ರಗಳಲ್ಲಿ ಸಮಾಜವಿಜ್ಞಾನ ಪರೀಕ್ಷೆಗೆ ಒಟ್ಟು ಒಟ್ಟು 20472 ಮಂದಿ ನೋಂದಾಯಿಸಿದ್ದು, 19785 ಮಂದಿ ಹಾಜರಾಗಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ ಕಂಟೈನ್ ಮೆಂಟ್ ವಲಯಗಳಿಂದ ಬಂದು 173 ಮಂದಿ ಪರೀಕ್ಷೆ ಬರೆದಿದ್ದಾರೆ, ಹಾಗೆಯೇ ಅನಾರೋಗ್ಯದ ಕಾರಣ ಇಬ್ಬರು ವಿದ್ಯಾರ್ಥಿಗಳುವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. ನೆರೆರಾಜ್ಯಗಳಿಂದ ಬಂದು ೧೯ ಮಂದಿ ಹಾಗೂ ವಲಸೆ ವಿದ್ಯಾರ್ಥಿಗಳು ೧೪೪ ಮಂದಿ ಪರೀಕ್ಷೆ ಬರೆದಿದ್ದಾರೆ.  ಎಂದು ತಿಳಿಸಿದ್ದಾರೆ.
ತಾಲ್ಲೂಕುವಾರು ಹಾಜರಿ ವಿವರ
ತಾಲ್ಲೂಕುವಾರು ಪರೀಕ್ಷೆಗೆ ಹಾಜರಾದವರ ವಿವರ ಇಂತಿದ್ದು, ಬಂಗಾರಪೇಟೆ 3285 ಮಂದಿ ನೊಂದಾಯಿಸಿದ್ದು, 3183 ಮಂದಿ ಹಾಜರಾಗಿ 102 ಮಂದಿ ಗೈರಾಗಿದ್ದರು. ಕೆಜಿಎಫ್ ತಾಲ್ಲೂಕಿನಲ್ಲಿ 2603 ಮಂದಿ ನೋಂದಾಯಿಸಿದ್ದು,2526 ಮಂದಿ ಹಾಜರಾಗಿ 77 ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನಲ್ಲಿ 5445 ಮಂದಿ ನೋಂದಾಯಿಸಿದ್ದು, ೫೨೩೮ ಮಂದಿ ಹಾಜರಾಗಿ 216 ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನಲ್ಲಿ 3041 ಮಂದಿ ನೋಂದಾಯಿಸಿದ್ದು, 2905 ಮಂದಿ ಹಾಜರಾಗಿ 136 ಮಂದಿ ಗೈರಾಗಿದ್ದಾರೆ.
ಉಳಿದಂತೆ ಮುಳಬಾಗಿಲು ತಾಲ್ಲೂಕಿನಲ್ಲಿ 3243 ಮಂದಿ ನೋಂದಾಯಿಸಿದ್ದು, ೩೧೫೧ ಮಂದಿ ಹಾಜರಾಗಿದ್ದು, 92 ಮಂದಿ ಗೈರಾಗಿದ್ದಾರೆ. ಹಾಗೆಯೇ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 2846 ಮಂದಿ ನೋಂದಾಯಿಸಿದ್ದು, 2782 ಮಂದಿ ಹಾಜರಾಗಿ 64 ಮಂದಿ ಗೈರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss