spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋಲಾರ| ಗಡಿಯಲ್ಲಿ ದಾಳಿ ಖಂಡಿಸಿ ಬಜರಂಗದಳದಿಂದ ಚೀನಾ ಧ್ವಜಕ್ಕೆ ಬೆಂಕಿ

- Advertisement -Nitte

ಕೋಲಾರ:ವಿನಾಕಾರಣ ಗಡಿಯಲ್ಲಿ ಕಾಲುಕೆರೆದು ಜಗಳ ತೆಗೆಯುತ್ತಿರುವ ಚೀನಾ ವರ್ತನೆಯನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ನಗರದ ಬಸ್‌ನಿಲ್ದಾಣದಲ್ಲಿ ವೀರಮರಣವಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ, ಚೀನಾ ಧ್ವಜಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸ್‌ನಿಲ್ದಾಣ ವೃತ್ತದಲ್ಲಿ ಚೀನಾ ದಾಳಿಯಿಂದ ವೀರಮರಣವಪ್ಪಿದ ಯೋಧರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, ೨ ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಭಾರತ ಶಾಂತಿ ಬಯಸುತ್ತದೆ, ಆದರೆ ತನ್ನ ಸಾರ್ವಭೌಮತೆಗೆ ಧಕ್ಕೆ ಬಂದರೆ ಸಹಿಸಿಕೊಂಡು ಸುಮ್ಮನಿರಲ್ಲ ಎಂಬುದನ್ನು ನಮ್ಮ ಯೋಧರು ಚೀನಾ ಸೈನಿಕರಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಚೀನಾ ಒಂದು ದುಷ್ಟರಾಷ್ಟ್ರವಾಗಿದ್ದು, ಬೆನ್ನಿಗೆ ಚೂರಿ ಹಾಕುವ ಇಂತಹ ಪಾಪಿಗಳಿಗೆ ನಮ್ಮ ಸೇನೆ ತಕ್ಕ ಪಾಠ ಕಲಿಸಲು ಶಕ್ತವಾಗಿದೆ, ಇದಕ್ಕೆ ನಮ್ಮ ಪ್ರಧಾನಿಗಳು ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಚೀನಾ ವಸ್ತುಗಳ ನಿಷೇಧಕ್ಕೆ ಆಗ್ರಹ
ನಮ್ಮ ದೇಶದಲ್ಲಿ ತಾನು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಹೊಂದಿರುವ ಚೀನಾ ಇಂದು ನಮಗೆ ದ್ರೋಹ ಬಗೆಯುತ್ತಿದೆ, ಇಂತಹ ದುಷ್ಟ ರಾಷ್ಟ್ರದ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯರು ಚೀನಾ ಉತ್ಪನ್ನಗಳನ್ನು ಖರೀದಿಸದೇ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದ ಅವರು, ದೇಶದ ಜನತೆ ಚೀನಾ ವಸ್ತುಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ಬಜರಂಗದಳ ಕಾರ್ಯಕರ್ತರು ಚೀನಾ ವಿರುದ್ದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಬಾಬು,ವಿಜಯಕುಮಾರ್, ಡಿ.ಆರ್.ನಾಗರಾಜ್, ಅಪ್ಪಿ,ಸಾಯಿಕುಮಾರ್, ಸಾಯಿಸುಮನ್, ಸಾಯಿಮೌಳಿ, ಎಬಿವಿಪಿ ಹರೀಶ್, ವಿನಯ್, ಭವಾನಿ, ಪ್ರವೀಣ್, ಆನಂದ್, ಸುಧಾಕರ್, ಕುಮಿ, ದಮ್ಮಿ,ದೇವರಾಜ್, ಸುನಿ, ರಾಜೇಶ್, ಅಭಿ, ಮನು, ಅಮ್ಸ್, ಸಂದೇಶ್, ಮಂಜು, ಯಶವಂತ್, ಮಾದೇಶ್, ಶ್ರೀಧರ್, ನಂದೀಶ್ ಮತ್ತಿತರರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss