ಕೋಲಾರ: ಅಂತರ್ಜಲ ವೃದ್ದಿಗೆಂದು ಚೆಕ್ಡ್ಯಾಂಗಳನ್ನು ನಿರ್ಮಿಸಲಾಗಿದೆ, ಇದು ಅವೈಜ್ಞಾನಿಕವಲ್ಲ, ಇದನ್ನು ಒಡೆದು ಹಾಕಬೇಕು ಎಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೆಸರೇಳದೇ ಶಾಸಕ ರಮೇಶ್ಕುಮಾರ್ ವಿರುದ್ದ ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೆಸಿ ವ್ಯಾಲಿ ನೀರು ಹರಿಯುತ್ತಿರುವ ತಾಲ್ಲೂಕಿನ ಎಸ್.ಅಗ್ರಹಾರ ಕೆರೆ ಹಾಗೂ ಜನ್ನಘಟ್ಟ ಕೆರೆಯಲ್ಲಿ ನಿರ್ಮಿಸಿರುವ ಪಂಪ್ಹೌಸ್ ಅನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆಕ್ಡ್ಯಾಂಗಳನ್ನು ಅವೈಜ್ಞಾನಿವಾಗಿ ನಿರ್ಮಿಸಿದ್ದಾರೆ ಎಂದು ಪದ ಬಳಕೆ ಮಾಡಲು ನಾನೇನು ದಡ್ಡನಲ್ಲ, ಇದೇನು ತಪ್ಪಲ್ಲ, ಈಗ ಹೊಡೆಯುತ್ತವೆ ಎಂದರೆ ನಾನು ಸಹಿಸಲ್ಲ ಎಂದು ಹೇಳಿದರು.
ಕೆಸಿ ವ್ಯಾಲಿ ಯೋಜನೆಯಲ್ಲಿ ಗುರುತಿಸಿರುವ ಕೆರೆಗಳಿಗೆ ನೀರು ತುಂಬಿಸಲು ಸಂಕಲ್ಪ ಮಾಡಿದ್ದು, ಇದಕ್ಕೆ ರೈತರು ಸಹಕಾರ ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೆಸಿ ವ್ಯಾಲಿ ಯೋಜನೆಯಲ್ಲಿ ಗುರುತಿಸಿರುವ ಕೆರೆಗಳಿಗೆ ನೀರು ತುಂಬಿಸಲು ಸಂಕಲ್ಪ ಮಾಡಿದ್ದು, ಇದಕ್ಕೆ ರೈತರು ಸಹಕಾರ ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಮಳೆ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿಸಲು ಚೆಕ್ ಡ್ಯಾಂ ನಿರ್ಮಿಸಲಾಗಿದೆ, ಕೆಸಿ ವ್ಯಾಲಿ ಯೋಜನೆಯಿಂದ ಮೊದಲ ಹಂತದಲ್ಲಿ ೧೨೬ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ, ೨ನೇ ಹಂತದಲ್ಲಿ ಹೆಚ್ಚುವರಿಯಾಗಿ ೧೩೭ ಕೆರೆಗಳನ್ನು ಗುರುತಿಸಲಾಗಿದೆ ಎಂದರು.
ರೈತರು ಅಕ್ರಮ ಸಂಪರ್ಕಗಳನ್ನು ಪಡೆದುಕೊಂಡಿದ್ದರಿಂದ ನೀರು ಮುಂದಿನ ಕೆರೆಗಳಿಗೆ ಹರಿದಿಲ್ಲ, ಅಲ್ಲಲ್ಲಿ ಅಕ್ರಮ ಸಂಪರ್ಕ ಪಡೆದುಕೊಂಡಿದ್ದರಿಂದ ಸರಾಗವಾಗಿ ಹರಿದಿಲ್ಲ, ಅದೆಲ್ಲ ಈಗ ಸಮಸ್ಯೆ ಬಗೆಹರಿದಿದೆ, ಜಿಲ್ಲೆಯ ರೈತರು ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದು ಕೋರಿದರು.
ಅಂತರ್ಜಲ ವೃದ್ಧಿಸಲು ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ, ೩೬೦ರಿಂದ ೪೦೦ ಎಂಎಲ್ಡಿ ನೀರು ಹರಿಸಬೇಕಾಗಿತ್ತು, ಈಗಾಗಲೇ ಎರಡ್ಮೂರು ಸಭೆ ನಡೆಸಿದ್ದು, ಸೆಪ್ಟೆಂಬರ್ ಒಳಗೆ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಕೊರೋನಾ ನಿರ್ವಹಣೆ ರಾಜ್ಯ,ಕೇಂದ್ರ ಯಶಸ್ವಿ
ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಯಶಸ್ವಿಯಾಗಿದೆ, ಲಾಕ್ ಡೌನ್ ಆದೇಶ ಮಾಡಿದ್ದು ನಾವೇ, ಸುಮಾರು ದಿನ ಲಾಕ್ಡೌನ್ ಮುಂದುವರೆಸಿದರೆ ಪರಿಸ್ಥಿತಿ ಏನಾಗತ್ತೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ, ಜೀವ ಉಳಿಸಲು ಪ್ರಯತ್ನ ನಡೆಸಿದ್ದು, ಜೀವನ ರೂಪಿಸಿಕೊಳ್ಳಲು ನಾವು ನೆರವು ನೀಡಬೇಕಲ್ಲ, ಅದಕ್ಕೆ ಪರಿಹಾರ ಕೊಡಿ, ಇದಕ್ಕೆ ಹಣ ಕೊಡಿ ಎಂದು ಅದೇನು ಅಗ್ರಹಾರ ಕೆರೆಯಲ್ಲಿ ಸಿಗತ್ತ ಎಂದು ಪ್ರಶ್ನಿಸಿದರು.
ಪ್ರತಿ ಜಿಲ್ಲೆಯಲ್ಲೂ ಕೊರೊನಾ ಆಸ್ಪತ್ರೆಗಳನ್ನು ಗುರುತಿಸಲಾಗಿದೆ, ಈಗ ಹೊರರಾಜ್ಯಗಳಿಂದ ಬಂದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ, ಹೊರಗಡೆಯಿಂದ ಬಂದವರನೆಲ್ಲಾ ಆರೋಗ್ಯ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ, ಸೋಂಕು ಒತ್ತೆಯಾದರೆ ಚಿಕಿತ್ಸೆ ಕೊಡಿಸಲು ಸರ್ಕಾರ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸತತವಾಗಿ ಲಾಕ್ಡೌನ್, ಸೀಲ್ಡೌನ್ ಮುಂದುವರೆಸಿಕೊಂಡರೆ ಪರಿಸ್ಥಿತಿಯನ್ನು ನಾವು ನಿಭಾಯಿಸಬೇಕಲ್ಲ, ಟೀಕೆ, ಆರೋಪ ಮಾಡುವವರಿಗೆ ಏನು ಉತ್ತರ ಕೊಡೋಕ್ಕೆ ಆಗುತ್ತೆ, ಕೊರೊನಾ ವೈರಸ್ ನಿಯಂತ್ರಣದಲ್ಲಿ ಇಡೀ ಪ್ರಪಂಚ ದೇಶವನ್ನು ಶ್ಲಾಘಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ,ಚೌಡರೆಡ್ಡಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಹೆಚ್.ವಿ.ದರ್ಶನ್,ವಿಭಾಗಾಧಿಕಾರಿ ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.