ಕೋಲಾರ: ಜಿಲ್ಲೆಯಲ್ಲಿ ಗುರುವಾರ ೧೦೭ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ೧೬೫೩ ಕ್ಕೆ ಏರಿದೆ. ಜತೆಗೆ ಇಂದು ೧೦ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮತ್ತು ಇಂದು ನಾಲ್ವರು ಸಾವನ್ನಪ್ಪಿದ್ದಾರೆ.
ಇಂದು ಪಾಸಿಟೀವ್ ಬಂದಿರುವ ಎಲ್ಲರೂ ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯ ಹಾಗೂ ಇಂದಿನಿಂದ ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿರುವ ಹಾಸ್ಟೆಲ್ ಕಟ್ಟಗಳಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಕೋಲಾರ ತಾಲೂಕಿನಲ್ಲಿ ೬೫, ಮಾಲೂರು ೧೧, ಬಂಗಾರಪೇಟೆ ೯, ಕೆಜಿಎಫ್ನಲ್ಲಿ೫, ಮುಳಬಾಗಿಲಿನಲ್ಲಿ ೧೦, ಶ್ರೀನಿವಾಪುರದಲ್ಲಿ ೭ ಪಾಸಿಟೀವ್ ಪ್ರಕರಣ ವರದಿಯಾಗಿದೆ.
ಇಂದು ೧೦ ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಹೊಂದಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ ೮೨೬ ಆಗಿದೆ.
ಕೋಲಾರ ತಾಲೂಕಿನಿಂದ ಇಂದು ೭, ಕೆಜಿಎಫ್ನಲ್ಲಿ ೩,ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೭೯೧ ಆಗಿದೆ. ತುರ್ತು ನಿಗಾ ಘಟಕದಲ್ಲಿ ೧೮ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ನಾಲ್ವರು ಸತ್ತಿದ್ದು, ಒಟ್ಟು ಈವರೆಗೂ ಸತ್ತವರ ಸಂಖ್ಯೆ ೩೬ ಆಗಿದೆ. ಇಂದು ಕೋಲಾರದಲ್ಲಿ ೧, ಬಂಗಾರಪೇಟೆ-೧, ಮುಳಬಾಗಿಲಿನಲ್ಲಿ ೨ ಸಾವು ಸಂಭವಿಸಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೧೪೮೯೩ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೨೮೦೨೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೨೫೩೫೧ ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ.