ಕೋಲಾರ: ಜಿಲ್ಲೆಯಲ್ಲಿ ಬುಧವಾರ ೧೦೬ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ೪೨೨೪ಕ್ಕೇ ಏರಿದೆ. ಜತೆಗೆ ಒಂದೇ ದಿನ ೫೩ ಮಂದಿ ಗುಣಮುಖರಾಗಿದ್ದಾರೆ.
ಪಾಸಿಟೀವ್ ಬಂದಿರುವ ಎಲ್ಲರೂ ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯ ಹಾಗೂ ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿರುವ ಹಾಸ್ಟೆಲ್ ಕಟ್ಟಗಳಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಕೋಲಾರ ತಾಲೂಕಿನಲ್ಲಿ ೫೩, ಮಾಲೂರು ೫, ಬಂಗಾರಪೇಟೆ ೮, ಕೆಜಿಎಫ್ ೧೪, ಮುಳಬಾಗಿಲು ೯, ಶ್ರೀನಿವಾಸಪುರದಲ್ಲಿ ೧೭ ಪ್ರಕರಣ ವರದಿಯಾಗಿದೆ.
ಇಂದು ೫೩ ಮಂದಿ ಗುಣಮುಖರಾಗಿ ಬಿಡುಗಡೆಹೊಂದಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ ೩೪೩೮ ಕ್ಕೇರಿದೆ.
ಇಂದು ಬಿಡುಗಡೆಯಾದವರಲ್ಲಿ ಕೋಲಾರದಿಂದ ೧೩, ಮಾಲೂರು ೧೦,ಬಂಗಾರಪೇಟೆ ೧, ಕೆಜಿಎಫ್ ೧೩, ಮುಳಬಾಗಿಲು ೧೧ ಹಾಗೂ ಶ್ರೀನಿವಾಸಪುರದಿಂದ ೫ ಮಂದಿ ಸೇರಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೭೧೯ ಆಗಿದೆ. ತುರ್ತು ನಿಗಾ ಘಟಕದಲ್ಲಿ ೨೮ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.ಈವರೆಗೂ ಸತ್ತವರ ಸಂಖ್ಯೆ ೬೯ ಆಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೩೭೩೧೩ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೫೬೧೯೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೪೧೩೫೬ ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ. ೪೩೮ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.