Monday, July 4, 2022

Latest Posts

ಕೋಲಾರ ಜಿಲ್ಲೆಯಲ್ಲಿ ಶನಿವಾರ 4 ಮಂದಿಗೆ ಕೋವಿಡ್ ಸೋಂಕು, 24 ಜನರು ಬಿಡುಗಡೆ

ಹೊಸ ದಿಗಂತ ವರದಿ, ಕೋಲಾರ:

ಜಿಲ್ಲೆಯಲ್ಲಿ ಶನಿವಾರ ೪ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 9311 ಕ್ಕೇ ಏರಿದೆ. ಜತೆಗೆ ಒಂದೇ ದಿನ 24 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು ಗುಣಮುಖರಾಗಿ ಬಿಡುಗಡೆಹೊಂದಿದವರ ಸಂಖ್ಯೆ 8995 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 145 ಆಗಿದೆ.
ತುರ್ತು ನಿಗಾ ಘಟಕದಲ್ಲಿ 22 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ ಸತ್ತವರ ಸಂಖ್ಯೆ 171ಆಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೭೯೮೮೫ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 160332 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 151451 ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ. 1452 ಮಂದಿಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss