Thursday, July 7, 2022

Latest Posts

ಕೋಲಾರ ಜಿಲ್ಲೆಯಲ್ಲಿ ಶುಕ್ರವಾರ ಕೊರೋನಾಗೆ ಮೊದಲ ಬಲಿ: 6 ಮಂದಿಗೆ ಪಾಸಿಟಿವ್

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ೬ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 90ಕ್ಕೆ ಏರಿದ್ದು, ಇಂದು ಒಂದು ಸಾವು ಸಂಭವಿಸಿದೆ.
ಇದರಲ್ಲಿ ೪೨ ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೪೭ ಆಗಿದೆ. ತುರ್ತು ನಿಗಾ ಘಟಕದಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇಂದು ಪತ್ತೆಯಾದ ಆರು ರೋಗಿಗಳ ಪೈಕಿ ನಾಲ್ವರು ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆ ತಲಾ ಒಂದೊಂದು. ಕೆಜಿಎಫ್‌ನ ೨೨ ವರ್ಷದ ಆರೋಗ್ಯ ಕಾರ್ಯಕರ್ತೆ ಸೋಂಕಿತರಾಗಿದ್ದು, ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಗಾರಪೇಟೆಯ ೪೫ ವರ್ಷದ ಪುರುಷ ಅಂತರ ರಾಜ್ಯದ ಪ್ರಯಾಣದ ಹಿನ್ನಲೆ ಹೊಂದಿದ್ಚದ ಪಿ.೮೪೯೫ರ ಸಂಪರ್ಕದಿಂದ ಸೋಂಕಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕೋಲಾರದ ೩೫ ಮತ್ತು ೪೫ ವರ್ಷದ ಇಬ್ಬರು ಪುರುಷರು ಅಂತರರಾಜ್ಯ ಪ್ರಯಾಣದ ಹಿನ್ನಲೆ,ಸೋಂಕಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರದ ಮತ್ತೊಬ್ಬ ೪೪ ವರ್ಷದ ಪುರುಷ ಪಿ.೧೦೪೪೫ ರೋಗಿಯಿಂದ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರದ ೪೯ ವರ್ಷದ ಆರೋಗ್ಯ ಕಾರ್ಯಕರ್ತೆ ಸೋಂಕಿತಳಾಗಿದ್ದು, ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೧೪೭೨ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೧೦೬೫೦ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೧೦೧೧೪ ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ.
ಸೋಂಕಿತರು ಇದ್ದ ಪ್ರದೇಶವನ್ನು ಸ್ಥಳೀಯ ಸಂಸ್ಥೆ ಪೊಲೀಸರು ಸೀಲ್ ಡೌನ್ ಮಾಡಿದ್ದು, ಜಿಲ್ಲೆಯಲ್ಲಿ ಆರು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ ೪೨ ಆಗಿದೆ.
ಬಿಡುಗಡೆಯಾದವರಲ್ಲಿ ಕೋಲಾರದ ಇಬ್ಬರು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ನಾಲ್ಕು ಮಂದಿ ಸೇರಿದ್ದಾರೆ.
ಮೊದಲನೇ ಸಾವು ಅಂತ್ಯಸಂಸ್ಕಾರ
ಜಿಲ್ಲೆಯಲ್ಲಿ ಕೊರೋನಾದಿಂದ ಮೊದಲ ಸಾವು ಸಂಭವಿಸಿದ್ದು, ಕೆಜಿಎಫ್ ತಾಲ್ಲೂಕಿನ ತೂಕಲ್ಲು ಗ್ರಾಮದ ೪೩ ವರ್ಷದ ಮಹಿಳೆ ಮೃತಪಟ್ಟವರಾಗಿದ್ದು, ಅವರ ಮೃತದೇಹಕ್ಕೆ ಕೋವಿಡ್ ಮಾರ್ಗಸೂಚಿಯಂತೆ ನಗರದ ಹಿಂದೂ ರುದ್ರಭೂಮಿಯಲ್ಲಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯ ಸಂಸ್ಕಾರ ನಡೆಸಿದರು.
ದೆಹಲಿಯಿಂದ ಕೆಜಿಎಫ್ ತಾಲ್ಲೂಕಿನ ತೂಕಲ್ಲು ಗ್ರಾಮಕ್ಕೆ ಬಂದಿದ್ದ ಈ ಮಹಿಳೆಗೆ ಕೋವಿಡ್ ಪಾಸಿಟೀವ್ ಬಂದ ಹಿನ್ನಲೆಯಲ್ಲಿ ನಗರ ಹೊರವಲಯದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮೃತರ ಪತಿಗೂ ಪಾಸಿಟೀವ್ ಬಂದಿದ್ದು, ಇಡೀ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿರುವುದರಿಂದ ಇಂದು ಮುಂಜಾನೆ ಮೃತಪಟ್ಟ ಮಹಿಳೆಯನ್ನು ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯೇ ಕೋವಿಡ್ ಮಾರ್ಗಸೂಚಿಯಂತೆ ಸುರಕ್ಷತಾ ಕಿಟ್ ಧರಿಸಿ ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss