Sunday, June 26, 2022

Latest Posts

ಕೋಲಾರ ಜಿಲ್ಲೆಯಲ್ಲಿ 3 ಕೋವಿಡ್ ಪ್ರಕರಣ , ಸೋಂಕಿತರ ಸಂಖ್ಯೆ 28ಕ್ಕೇರಿಕೆ

ಕೋಲಾರ:  ನಗರದಲ್ಲಿ ಎರಡು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಮೂರು ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಈವರೆವಿಗೂ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ ೨೮ ಕ್ಕೇರಿದೆ.ಈವರೆವಿಗೂ ಪತ್ತೆಯಾದ ಒಟ್ಟು ಸಕ್ರಿಯ ಪ್ರಕರಣಗಳು ೨೮, ಈ ಪೈಕಿ ಗುಣಮುಖರಾಗಿ ೧೧ ಮಂದಿ ಬಿಡುಗಡೆಯಾಗಿದ್ದು, ಸದ್ಯಕ್ಕೆ ಸಕ್ರಿಯ ಪ್ರಕರಣಗಳು ೧೭ ಆಗಿದೆ.
ಮೂರು ದಿನಗಳ ಹಿಂದಷ್ಟೇ ಕೋಲಾರದ ಗೌರಿಪೇಟೆಯಲ್ಲಿ ಪತ್ತೆಯಾಗಿದ್ದ ಪಿ.೩೦೦೭ ರ ಸಂಪರ್ಕ ಹೊಂದಿದ್ದ ಆತನ ೩೫ ವರ್ಷದ ಪತ್ನಿ ಹಾಗೂ ೩೮ ವರ್ಷದ ಸ್ನೇಹಿತ ಇಬ್ಬರು ಸೋಂಕಿತರಾಗಿ ಕೋವಿಡ್ ಆಸ್ಪತ್ರೆಗೆ ಸೇರಿದ್ದಾರೆ.
ಇವರು ವಾಸ ಮಾಡುತ್ತಿದ್ದ ಪ್ರದೇಶಗಳನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್ ಪ್ರದೇಶದಲ್ಲಿಯೇ ನಗರದೇವತೆ ಕೋಲಾರಮ್ಮ, ಐತಿಹಾಸಿಕ ಸೋಮೇಶ್ವರ ದೇವಾಲಯಗಳು ಹಾಗೂ ಮಸೀದಿ ಇದ್ದು, ಸರಕಾರದ ನಿರ್ಧಾರದಂತೆ ಜೂ.೮ ಕ್ಕೆ ಈ ದೇವಾಲಯಗಳು ತೆರೆಯುವುದು ಅನುಮಾನಾಸ್ಪದವಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪ್ರತಿ ನಿತ್ಯ ಮಾಲೂರು ತಾಲೂಕಿನ ಚಂಬೆ ಗ್ರಾಮದಿಂದ ಬೆಂಗಳೂರಿಗೆ ಕೆಲಸಕ್ಕೆ ತೆರಳುತ್ತಿದ್ದ ೩೫ ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಮೂವರು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss