ಕೋಲಾರ: ಜಿಲ್ಲೆಯಲ್ಲಿ ಬುಧವಾರ ೭೮ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ೩೧೦೨ ಕ್ಕೆ ಏರಿದೆ. ಜತೆಗೆ ಒಂದೇ ದಿನ ೧೧೬ ಮಂದಿ ಗುಣಮುಖರಾಗಿ ಬಿಡುಗಡೆಯಾಗಿರುವುದು ದಾಖಲೆಯಾಗಿದೆ.
ಪಾಸಿಟೀವ್ ಬಂದಿರುವ ಎಲ್ಲರೂ ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯ ಹಾಗೂ ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿರುವ ಹಾಸ್ಟೆಲ್ ಕಟ್ಟಗಳಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಕೋಲಾರ ತಾಲೂಕಿನಲ್ಲಿ ೩೧,ಮಾಲೂರು ೨೬, ಬಂಗಾರಪೇಟೆ ೯, ಕೆಜಿಎಫ್ ೭, ಮುಳಬಾಗಿಲಿನಲ್ಲಿ ೨, ಶ್ರೀನಿವಾಸಪುರದಲ್ಲಿ ೩ ಪಾಸಿಟೀವ್ ಪ್ರಕರಣ ವರದಿಯಾಗಿದೆ.
ಇಂದು ೧೧೬ ಮಂದಿ ಗುಣಮುಖರಾಗಿ ಬಿಡುಗಡೆಹೊಂದಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ ೨೪೬೮ ಆಗಿದೆ.
ಇಂದು ಬಿಡುಗಡೆಯಾದವರಲ್ಲಿ ಕೋಲಾರದಿಂದ ೪೯, ಮಾಲೂರು ೨೫, ಬಂಗಾರಪೇಟೆ ೪, ಕೆಜಿಎಫ್ ೧೭, ಮುಳಬಾಗಿಲು ೧೮ ಹಾಗೂ ಶ್ರೀನಿವಾಸಪುರದಿಂದ ೩ ಬಿಡುಗಡೆಯಾಗಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೫೭೮ ಆಗಿದೆ. ತುರ್ತು ನಿಗಾ ಘಟಕದಲ್ಲಿ ೨೦ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ಮೂರು ಸಾವು ಸೇರಿದಂತೆ ಈವರೆಗೂ ಸತ್ತವರ ಸಂಖ್ಯೆ ೫೬ ಆಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ ೨೭೭೮೮ ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ೪೩೭೦೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೩೨೩೩೧ ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ. ೪೨೨ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.