Wednesday, August 10, 2022

Latest Posts

ಕೋಲಾರ| ದನದ ಮಾಂಸದ ಅಂಗಡಿಯಲ್ಲಿ ಚೈನಿಂದ ಬಾಲಕನನ್ನು ಕಟ್ಟಿಹಾಕಿ ಅಮಾನವೀಯ ಶಿಕ್ಷೆ

ಕೋಲಾರ: ಬಾಲಕನೊಬ್ಬನನ್ನು ನಾಯಿಯನ್ನು ಕಟ್ಟಿಹಾಕುವ ಚೈನಿನಲ್ಲಿ ಕಟ್ಟಿಹಾಕಿ ಅಮಾನವೀಯ ರೀತಿಯಲ್ಲಿ ಶಿಕ್ಷಿಸಿರುವ ಘಟನೆ ನಗರದ ಬಂಬೂಬಜಾರ್ ರಸ್ತೆಯಲ್ಲಿರುವ ಮಾಂಸದ ಅಂಗಡಿಯೊಂದರಲ್ಲಿ ಬೆಳಕಿಗೆ ಬಂದಿದೆ. ನಗರದ ಬಂಬೂಬಜಾರ್ ರಸ್ತೆಯಲ್ಲಿರುವ ದನದ ಮಾಂಸದ ಮಳಿಗೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಬಾಲಕನನ್ನು ರಕ್ಷಿಸಿರುವ ಗಲ್‌ಪೇಟೆ ಠಾಣೆ ಪೊಲೀಸರು, ಮಳಿಗೆಯ ಮಾಲೀಕ ಜಾಕೀರ್‌ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಂಬೂಬಜಾರ್ ರಸ್ತೆಯಲ್ಲಿರುವ ಧನದ ಮಾಂಸದ ಅಂಗಡಿ ಬಳಿ ನಾಯಿ ಕಟ್ಟಿಹಾಕುವ ಚೈನಿನಲ್ಲಿ ೧೨ ವರ್ಷದ ಬಾಲಕನೋರ್ವನನ್ನು ಕಳೆದ ೧೦ ದಿನಗಳಿಂದ ಕಟ್ಟಿಹಾಕಿ ಬಂಧನದಲ್ಲಿಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಗಲ್‌ಪೇಟೆ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು.
ಕೂಡಲೇ ಸ್ಥಳಕ್ಕೆ ತೆರಳಿದ ಪಿಎಸ್‌ಐ ವೇದಾವತಿ ಮತ್ತು ಸಿಬ್ಬಂದಿ ಅಂಗಡಿ ಮಾಲೀಕ ಜಾಕೀರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕ ನಮ್ಮ ಅಣ್ಣನ ಮಗನಾಗಿದ್ದು, ಲಾಕ್‌ಡೌನ್ ಇದ್ದರೂ ವಿನಾಕಾರಣ ನಗರದಲ್ಲಿ ಓಡಾಡುತ್ತಿದ್ದನು, ಹೀಗಾಗಿ ನಮ್ಮ ಅಣ್ಣ ಹೇಳಿದ್ದಕ್ಕಾಗಿ ಕಟ್ಟಿಹಾಕಲಾಗಿದೆ ಎಂದು ಸಬೂಬು ನೀಡಿದ್ದಾನೆ.
ಆದರೆ ಪೊಲೀಸರು ಬಾಲಕನನ್ನು ರಕ್ಷಿಸಿ, ಅಂಗಡಿಯನ್ನು ಮುಚ್ಚಿಸಿ ಮಾಲೀಕ ಜಾಕೀರ್‌ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಬಳಿಕ ಬಾಲಕನನ್ನು ಯಾವ ಕಾರಣಕ್ಕಾಗಿ ಕಟ್ಟಿಹಾಕಲಾಗಿತ್ತು ಎನ್ನುವ ಸತ್ಯಾಂಶ ಹೊರಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss