Monday, August 8, 2022

Latest Posts

ಕೋಲಾರ ನಗರದ ಅಭಿವೃದ್ದಿ ದೃಷ್ಟಿಯಿಂದ ರಿಂಗ್‌ರಸ್ತೆ ನಿರ್ಮಾಣಕ್ಕೆ ಕ್ರಮ: ಬಸವರಾಜ್

ಕೋಲಾರ:  ಕೋಲಾರ ನಗರದ ಅಭಿವೃದ್ದಿ ದೃಷ್ಟಿಯಿಂದ ರಿಂಗ್ ರಸ್ತೆ ನಿರ್ಮಾಣದ ಕುರಿತು ಸಂಸದರು, ವಿಧಾನಪರಿಷತ್ ಸದಸ್ಯರು ಮನವಿ ಮಾಡಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸುಮಾರು ೬೫೦ ಕೋಟಿರೂ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡಿದರೆ ಸಾಕಷ್ಟು ಅನುಕೂಲವಾಗುವುದರಿಂದ ಈ ಬಗ್ಗೆ ಕೂಡಲೇ ಚರ್ಚಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಬಿಟ್ಟು ಬಂದಿದ್ದಾಯಿತು, ಬಿಜೆಪಿ ಪಕ್ಷದಲ್ಲಿ ಸ್ಪರ್ಧಿಸಿ ೬೩ ಸಾವಿರ ಮತಗಳ ಅಂತರದಿಂದ ಗೆದ್ದಿದ್ದೂ ಆಯಿತು. ಹೀಗಾಗಿ ಇನ್ನೊಂದು ಪಕ್ಷದ ವಿಚಾರ ನನಗೆ ಬೇಕಿಲ್ಲ ಎಂದು ಹೇಳಿದರು.
ಸರಕಾರವು ನನಗೆ ಒಂದು ಜವಾಬ್ದಾರಿ ನೀಡಿದ್ದು, ಕಾಯ-ವಾಚ-ಮನಸ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಯಾವ ಹಂತದಲ್ಲಿದೆ, ಇನ್ನೊಂದು ಮತ್ತೊಂದರ ವಿಚಾರ ನಾನು ಮಾತನಾಡುವುದಿಲ್ಲ. ಸಚಿವ ಸಂಪುಟದ ವಿಚಾರ ಮುಖ್ಯಮಂತ್ರಿಗಳ  ,ವಿಚಾರಕ್ಕೆ ಬಿಟ್ಟಿದ್ದು, ವರಿಷ್ಠರೊಂದಿಗೆ ಚರ್ಚಿಸಿ ಅಗತ್ಯ ತೀರ್ಮಾನ ಕೈಗೊಳ್ಳಲಿದ್ದಾರೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು
ಸ್ಪಷ್ಟಪಡಿಸಿದರು.
ನಾನು ಸಚಿವನನಾದ ಬಳಿಕ, ಇಲಾಖೆಯ ಎಲ್ಲ ಪ್ರಾಧಿಕಾರಗಳಲ್ಲಿ ವಿಶೇಷವಾಗಿ ,ಪತ್ರಕರ್ತರಿಗೆ ಶೇ.೫ರಷ್ಟು  ಮೀಸಲಾತಿ ನೀಡುವ ಸಂಬಂಧ ವಿಷಯ ರಾಜ್ಯದ ಎಲ್ಲಾ ಪ್ರಾಧಿಕಾರಗಳ ಆಯುಕ್ತರಿಗೂ ಸೂಚನೆಗಳನ್ನು ನೀಡಲಾಗಿದೆ. ನಾವು ನಿರ್ಮಿಸುವ ಬಡಾವಣೆಗಳಲ್ಲಿ ಶೇ.೫ರಷ್ಟನ್ನು ಮೀಸಲಿಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನುಮೋದನೆ ಕೊಡಿಸಲಾಗುವುದು ಎಂದರು. ಇದಲ್ಲದೆ ರೈತರ ಬಳಿ ಜಮೀನುಗಳನ್ನು ಪಡೆದು ನಿರ್ಮಿಸುವ ಬಡಾವಣೆಗಳಲ್ಲಿ ಶೇ.೫೦ರಷ್ಟನ್ನು ಅವರಿಗೂ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ತಾವು ಸಚಿವರಾದ ಬಳಿಕ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಾಗುತ್ತಿದ್ದು, ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದೇವೆ.
ಜಿಲ್ಲೆಗಳಲ್ಲಿನ ಹಾಗುಹೋಗುಗಳ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ, ೧೦ ಮಹಾನಗರ ಪಾಲಿಕೆಗಳಲ್ಲಿ ಯಾವ ರೀತಿ ಕೆಲಸಗಳು ನಡೆಯುತ್ತಿವೆ, ಸ್ಮಾರ್ಟ್ ಸಿಟಿಗಳ ಕೆಲಸ ಯಾವ ರೀತಿ ಇದೆ ಎಲ್ಲವನ್ನೂ ಪರಿಶೀಲಿಸಲಾಗಿದ್ದು, ೭ ಸ್ಮಾರ್ಟ್‌ಸಿಟಿ ಕೆಲಸಗಳು ಸೇರಿದಂತೆ ಎಲ್ಲ ಕೆಲಸಗಳೂ ಕೊರೋನಾ ನಡುವೆಯೂ ನಿಲ್ಲದೆ, ವೇಗವಾಗಿ ನಡೆಯುತ್ತಿರುವುದಾಗಿ ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಹಿತದೃಷ್ಟಿ ಅಗತ್ಯವಾಗಿ  ನೋಡಿಕೊಳ್ಳಬೇಕಾಗಿದ್ದು, ಅವರಿಗೆ ರಕ್ಷಣೆ, ಮಾಸ್ಕ್, ಗ್ಲೌಸ್, ಸಮವಸ್ತ್ರ ನೀಡಿ ಪ್ರತಿದಿನ ಆರೋಗ್ಯ ತಪಾಸಣೆಯನ್ನು ಮಾಡಲು ಸೂಚಿಸಿರುವುದಾಗಿ ಹೇಳಿದರು. ಮುಖ್ಯಮಂತ್ರಿಯವರು ಬೆಳಗಾವಿಗೆ ತೆರಳಿದ್ದು, ಪ್ರವಾಹದಿಂದ ಸಂಕಷ್ಟಕ್ಕೆ
ಒಳಗಾಗಿದ್ದ ಜನರೊಂದಿಗೆ ಚರ್ಚಿಸಿದ್ದಾರೆ. ಅಲ್ಲಿ ರಸ್ತೆಗಳು ಹಾಳಾಗಿರುವುದು ,ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ನಾನೂ ತಿಳಿದುಕೊಂಡಿದ್ದೇನೆ. ಸರಿಪಡಿಸಲು ಮುಂದಾಗುತ್ತೇವೆ ಎಂದರು.
ಕೊರೋನಾ ಹಿನ್ನೆಲೆಯಲ್ಲಿ ತೆರಿಗೆ ವಸೂಲಿಗೆ ವಿನಾಯಿತಿಯನ್ನು ನೀಡಲಾಗಿತ್ತು ಇದೀಗಮತ್ತೆ ಪ್ರಕ್ರಿಯೆ ಆರಂಭವಾಗಿದೆ. ಪುರಸಭೆ, ನಗರಸಭೆಗಳು ತಮ್ಮವ್ಯಾಪ್ತಿಗೆ ಬರುವುದಿಲ್ಲ. ಆಡಳಿತ ಮಂಡಳಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ
ಪ್ರಕ್ರಿಯೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಎಂಎಲ್‌ಸಿ ಗೋವಿಂದರಾಜು, ಡಿಸಿ ಸಿ.ಸತ್ಯಭಾಮ, ಎಸ್ಪಿ ಕಾರ್ತಿಕ್‌ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss