Monday, July 4, 2022

Latest Posts

ಕೋಲ್ಕತ್ತಾ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಶಾರ್ಜಾ: ಐಪಿಎಲ್ 28ನೇ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಟಾಸ್​ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡು ತಂಡಗಳಲ್ಲೂ ಒಂದು ಬದಲಾವಣೆಯಾಗಿದೆ. ಆರ್​ಸಿಬಿಯಲ್ಲಿ ಗುರುಕಿರಾತ್ ಬದಲು ಮೊಹಮ್ಮದ್ ಸಿರಾಜ್ ಹಾಗೂ ಕೆಕೆಆರ್​ ಬಳಗದಲ್ಲಿ ನರೈನ್ ಬದಲು ಟಾಮ್ ಬಾಂಟನ್​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಎರಡು ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದು 4 ಪಂದ್ಯಗಳ ಗೆಲುವು ಹಾಗೂ 2 ಸೋಲು ಕಂಡಿವೆ. ಆದರೆ ರನ್​ ರೇಟ್ ಆಧಾರದ ಮೇಲೆ ಕೋಲ್ಕತ್ತಾ 3ನೇ ಸ್ಥಾನದಲ್ಲಿದ್ದರೆ, ಆರ್​ಸಿಬಿ 4 ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡಗಳು 2ನೇ ಸ್ಥಾನಕ್ಕೇರಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss