Monday, July 4, 2022

Latest Posts

ಕೋವಿಡ್‌-19 ಸೋಂಕು ವಿಚಾರದಲ್ಲಿ ನನ್ನನ್ನು ದೂರ ಇಡಲಾಗುತ್ತಿದೆ ಎಂಬ ಆರೋಪ ಸುಳ್ಳು: ಸಚಿವ ಬಿ.ಶ್ರೀರಾಮುಲು

ಬಳ್ಳಾರಿ: ಕೋವಿಡ್‌-19 ಸೋಂಕು ವಿಚಾರದಲ್ಲಿ ನನ್ನನ್ನು ದೂರ ಇಡಲಾಗುತ್ತಿದೆ ಎಂಬ ಆರೋಪ ಸುಳ್ಳು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ನಾವೆಲ್ಲರೂ ಒಂದೇ ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ನಾನು ರಾಜ್ಯದ್ದು ನೋಡಿಕೊಳ್ಳುತ್ತಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಬೆಂಗಳೂರು ನೋಡಿಕೊಳ್ಳುತ್ತಿದ್ದರು. ಇದೀಗ ಅವರಿಗೆ ಸಮಸ್ಯೆಯಾಗಿದ್ದರಿಂದ ಕಂದಾಯ ಸಚಿವ ಆರ್‌.ಅಶೋಕ್‌ ರಿಗೆ ಜವಾಬ್ದಾರಿ ನೀಡಲಾಗಿದೆ.
ವೈದ್ಯಕೀಯ ಸಚಿವ ಸುಧಾ ಕರ್‌ ಅವರು ಬಳ್ಳಾರಿಗೆ ಬಂದಾಗ ನಾನು ಗೈರಾಗಿದ್ದು ನಿಜ. ಆದರೆ, ನಾನು ಮೊದಲೇ ಹೇಳಿ ಹೋಗಿದ್ದೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss