Monday, August 15, 2022

Latest Posts

ಕೋವಿಡ್‍ನಿಂದ ಮೃತಪಟ್ಟವರನ್ನು ದೇವಸ್ಥಾನ, ವಾಸಸ್ಥಳದಿಂದ ದೂರ ಸಮಾಧಿ ಮಾಡಲು ಒತ್ತಾಯ!

ಮಂಡ್ಯ: ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳನ್ನು ದೇವಸ್ಥಾನ, ಜಮೀನು ಹಾಗೂ ವಾಸ ಸ್ಥಳದಿಂದ ದೂರದಲ್ಲಿ ಸಮಾಧಿ ಮಾಡಬೇಕೆಂದು ತಾಲ್ಲೂಕಿನ ಇಂಡುವಾಳು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಶುಕ್ರವಾರ ಮೃತಪಟ್ಟ ವ್ಯಕ್ತಿಯ ಶವವನ್ನು ಇಂಡುವಾಳು ಗ್ರಾಪಂ ವ್ಯಾಪ್ತಿಯ ವಡ್ಡರಕಟ್ಟೆ ಮಹದೇಶ್ವರ ದೇವಾಲಯದ ಬಳಿಯ ಜಾಗದಲ್ಲಿ ಹೂಳಲು ಜಿಲ್ಲಾಡಳಿತ ಮುಂದಾದಾಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಆದರೆ ಸಂಜೆವೇಳೆಗೆ ಸರ್ಕಾರದ ಆದೇಶ ಎಂದು ಅಧಿಕಾರಿಗಳು ಜೆಸಿಬಿ ಯಂತ್ರದಿಂದ ಗುಂಡಿ ತೆಗೆಸಿ ಶವವನ್ನು ಸಮಾಧಿ ಮಾಡಿಹೋಗಿದ್ದಾರೆಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದರು.
ಜು.21ರಂದೇ ಶವಗಳನ್ನು ಹೂಳಲೆಂದು ಸ್ಥಳ ಗುರುತು ಮಾಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಹಾಗೂ ತಹಸಿಲ್ದಾರ್ ಅವರಿಗೆ ಮನವಿ ಮಾಡಲೆಂದು ಸುತ್ತಮುತ್ತಲ ಗ್ರಾಮಗಳ ಯಜಮಾನರು, ಮುಖಂಡರು, ಜನಪ್ರತಿನಿಧಿಗಳು ಜಮಾಯಿಸಿದ್ದೆವು. ಆದರೆ, ಅಧಿಕಾರಿಗಳು ನಮ್ಮ ಅಹವಾಲು ಕೇಳುವ ಸೌಜನ್ಯ ತೋರಿಸದೆ ವಾಹನಗಳನ್ನೇರಿ ಸೇರಿದ್ದ ಗ್ರಾಮಸ್ಥರನ್ನು ಅವಮಾನಿಸಿ ಹೋದರು ಎಂದು ಮುಖಂಡ ಇಂಡುವಾಳು ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss