Monday, August 8, 2022

Latest Posts

ಕೋವಿಡ್ ಅವ್ಯವಹಾರ ಕಾಂಗ್ರೆಸ್ ಆರೋಪ ನಿರಾಧಾರ, ರಾಜಕೀಯ ಪ್ರೇರಿತವಾದದ್ದು : ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಕೋವಿಡ್-೧೯ ನಿರ್ವಹಣೆಗೆ ಮಾಡಲಾಗಿರುವ ವೆಚ್ಚದಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ಸಿನ ಆರೋಪ ನಿರಾಧಾರ ಮತ್ತು ರಾಜಕೀಯ ಪ್ರೇರಿತವಾದದ್ದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿನ ನೆರೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಗೆ ಮಾಡಲಾಗಿರುವ ವೆಚ್ಚದಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಮತ್ತು ಈ ಕುರಿತು ಲೆಕ್ಕ ಕೋಡಿ ಎಂದು ಕೇಳಿದ ಕಾಂಗ್ರೆಸ್ಸಿಗರಿಗೆ ಇಗಾಗಲೇ ಲೆಕ್ಕವನ್ನು ನೀಡಲಾಗಿದೆ ಆದರೂ ಸ್ವೇತ ಪತ್ರ ಹೊರಡಿಸಿ ಎಂದು ಅವರು ಕೇಳುತ್ತಿರುವುದು ರಾಜಕೀಯ ಪ್ರೇರಿತವಾದದ್ದು, ಅದನ್ನು ಅರಗಿಸಿಕೊಳ್ಳಲಾಗದ ಅವರು ಇಂತಹ ಆರೋಪವನ್ನು ಮಾಡುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪ್ರಮುಖವಾಗಿ ಮೆಕ್ಕೆಜೋಳವನ್ನು ಅಧಿಕವಾಗಿ ಬೆಳೆಯಲಾಗುತ್ತಿದೆ. ಕಳೆದ ಒಂದು ವಾರದಿಂದ ಅಧಿಕ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿನ ತೇವಾಂಶ ಅಧಿಕವಾಗುತ್ತಿರುವುದರಿಂದ ಈ ಬೆಳೆಗೆ ಸ್ವಲ್ಪ ಮಟ್ಟಿನ ತೊಂದರೆ ಆಗುತ್ತಿದೆ. ಇದರ ನಿವಾರಣೆಗೆ ಯೂರಿಯಾ ಗೊಬ್ಬರದ ಬಳಕೆ ಅಧಿಕವಾಗಿರುವ ಹಿನ್ನಲೆಯಲ್ಲಿ ಪ್ರಸಕ್ತ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಸಂಭವಿಸಿದೆ ಎಂದರು.
ಯೂರಿಯಾ ಗೊಬ್ಬರ ಅಭಾವ ನಿವಾರಣೆಗೆ ಇಗಾಗಲೇ ಕೃಷಿ ಇಲಾಖೆಯ ಕಮೀಷನರ್ ಹಾಗೂ ಮಾರ್ಕೆಟಿಂಗ ಫೆಡರೇಷನ್ ಎಂಡಿಗಳ ಜಂಟಿ ಸಭೆಗಳನ್ನು ಮಾಡಿದ್ದೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ರಸಾಯ ಖಾತೆ ಸಚಿವ ಸದಾನಂದಗೌಡ ಅವರೊಂದಿಗೆ ಚರ್ಚಿಸಿದ್ದಾರೆ, ನಾನೂ ಸಹ ವಯಕ್ತಿಕವಾಗಿ ಮಾತನಾಡಿದ್ದೇನೆ ಸಧ್ಯದಲ್ಲೇ ೧೫ ಲೇಕ್‌ಗಳನ್ನು ಬಿಡುಗಡೆ ಮಾಡುವದಾಗಿ ಸದಾನಂದಗೌಡ ಅವರು ತಿಳಿಸಿದ್ದಾರೆ. ಸೋಮವಾರ ಡಾವಣೆಗೇರಿಗೆ ಲೇಕ್‌ಗಳು ಬರಲಿದ್ದು ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮೆಕ್ಕೆಜೋಳವನ್ನು ಹೆಚ್ಚು ಬೆಳೆಯುವ ಪ್ರದೇಶಗಳಿಗೆ ಐದು ಸಾವಿರ ಟನ್ ಹೆಚ್ಚುವರಿ ಯೂರಿಯಾ ನೀಡುವಂತೆ ಹೇಳಲಾಗಿದೆ. ಎಸ್.ಸಿ.ಎಫ್ ಯೂರಿಯಾ ಉತ್ಪಾದನೆಯನ್ನು ಪ್ರಾರಂಭಿಸಿದ್ದು ಆದರೆ ಕೋವಿಡ್ ಹಿನ್ನಲೆಯಲ್ಲಿ ಸಾಗಾಣಿಕೆಯನ್ನು ಸ್ಥಗಿತಗೊಳಿಸಿದ್ದರು. ಈಗ ರಸ್ತೆ ಮತ್ತು ರೈಲ್ವೆ ಮೂಲಕ ಸಾಗಾಣಿಕೆಯನ್ನು ಪ್ರಾರಂಭಿಸಿದ್ದಾರೆ ಅದು ಬಂದರೆ ಇನ್ನು ಹದಿನೈದು ದಿನಗಳಲ್ಲಿ ಅಗತ್ಯ ಯೂರಿಯಾ ಗೊಬ್ಬರದ ಪೂರೈಕೆಯನ್ನು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಜಿ.ಪಂ ಸಿಇಓ ರಮೇಶ ದೇಸಾಯಿ ಹಾಗೂ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss