Sunday, August 14, 2022

Latest Posts

ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ: ಕೇಂದ್ರ ಸರ್ಕಾರದಿಂದ ಸೂಚನೆ

ನವದೆಹಲಿ : ಕೇಂದ್ರ ಸರ್ಕಾರ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ ನೀಡಬೇಕು. ಈ ಮೂಲಕ ಆತ್ಮಸ್ಥೈರ್ಯ, ಮನೋ ಭಲ ಹೆಚ್ಚಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.
ಈ ಕುರಿತಂತೆ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ(ಡಿಜಎಚ್‌ಎಸ್) ಡಾ.ರಾಜೀವ್ ಗರ್ಗ್, ಕೊರೋನಾ ಸೋಂಕಿತರಾಗಿ ಆಸ್ಪತ್ರೆಯನ್ನು ಸೇರಿದಂತ ಸೋಂಕಿತರು ಸ್ಮಾರ್ಟ್ ಪೋನ್ ನೆರವಿನಿಂದ ತಮ್ಮ ಕುಟುಂಬದವರು, ಸ್ನೇಹಿತರ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡುತ್ತಿದ್ದರೇ, ಸೋಂಕಿತರಿಗೆ ನೈತಿಕ ಸ್ಥೈರ್ಯ, ಮಾನಸಿಕ ನೆಮ್ಮದಿ, ಬಾಹ್ಯ ಬೆಂಬಲ ಸಿಕ್ಕಂತಾಗುತ್ತದೆ. ಹೀಗಾಗಿ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ ನೀಡುವಂತೆ ಸೂಚಿಸಿದೆ.
ರೋಗಿಗಳು ಬಳಸುವ ಉಪಕರಣಗಳ ಮುಖಾಂತರ ಸೋಂಕು ಹರಡದಂತೆ ತಡೆಯುವುದು, ಸ್ಮಾರ್ಟ್‌ಫೋನ್‌ ಬಳಕೆಗೆ ಸಮಯ ನಿಗದಿ ಮುಂತಾದ ಮಾರ್ಗಸೂಚಿಗಳನ್ನು ಆಸ್ಪತ್ರೆಗಳೇ ರೂಪಿಸಬಹುದು ಎಂದು ಗರ್ಗ್‌ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss