Wednesday, August 17, 2022

Latest Posts

ಕೋವಿಡ್ ಕರಿಛಾಯೆಯ ನಡುವೆಯೂ ‘ಭೂಮಿ’ಯಲ್ಲಿ ಉಡುಪಿ ರಾಜ್ಯದಲ್ಲೇ ನಂ.1

ಉಡುಪಿ: ಕಳೆದ ಮೂರು ತಿಂಗಳುಗಳಿಂದ ಸಾಂಕ್ರಮಿಕ ಕೋವಿಡ್-19 ವ್ಯಾಧಿಯು ಉಡುಪಿ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದರೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ಸೇವೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಭೂ ದಾಖಲೆಗಳ ಗಣಕೀಕರಣ ಯೋಜನೆಯಾಗಿರುವ ಭೂಮಿಯಲ್ಲಿ ರಾಜ್ಯದಲ್ಲಿಯೇ ಉಡುಪಿ ನಂ. 1 ಆಗಿದೆ.

ಉಡುಪಿ ಜಿಲ್ಲೆಯ ಕಂದಾಯ ಇಲಾಖೆ ರಾಜ್ಯದಲ್ಲಿಯೇ ತ್ವರಿತ ಸೇವೆಯನ್ನು ಒದಗಿಸುತ್ತಿದೆ. ಮೇ ತಿಂಗಳಲ್ಲಿ ಭೂಮಿ ಯೋಜನೆಯಡಿ ಬರುವ ಸೇವೆಗಳಾದ ಭೂಮಿ ತಂತ್ರಾಂಶ, ಖಾತೆ ಬದಲಾವಣೆ, ಅಫಿಡವಿತ್ ಪರಿವರ್ತನೆ, ಎಸಿ ಕೋರ್ಟ್, ಡಿಸಿ ಕೋರ್ಟ್, ಆರ್‌ಟಿಸಿ, ಪೋಡಿ/ಸರ್ವೇ ಸಹಿತ ಅಂತಿಮ ರ್ಯಾಂಕ್‌ನಲ್ಲಿ 2.28 ಸಿಗ್ಮಾ ಅಂಕಗಳನ್ನು ಪಡೆದು ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ.

ಬಳ್ಳಾರಿ ಜಿಲ್ಲೆ 1.68 ಸಿಗ್ಮಾ ಅಂಕಗಳೊಂದಿಗೆ ಎರಡನೇ ಹಾಗೂ ಬಾಗಲಕೋಟೆ ಜಿಲ್ಲೆಯು 0.94 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಕರಾವಳಿಯ ಇನ್ನೆರಡು ಜಿಲ್ಲೆಗಳಾದ ಉತ್ತರಕನ್ನಡ 16 ಹಾಗೂ ದಕ್ಷಿಣ ಕನ್ನಡ 18ನೇ ಸ್ಥಾನಗಳಲ್ಲಿವೆ. ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ. ರಾಜ್ಯದ 24 ಜಿಲ್ಲೆಗಳು ಶೂನ್ಯ ಸಿಗ್ಮಾ ಅಂಕಗಳನ್ನು ಪಡೆದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!