ಬಳ್ಳಾರಿ: ಎನ್.ಸಿ.ಸಿಯು ಎಲ್ಲಾ ತರಹದ ಚಟುವಟಿಕೆಗಳಲ್ಲಿ ಎನ್ ಸಿ ಸಿ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಹಾಗೂ ಯಾವುದೇ ಸಮಯದಲ್ಲಿ ಜಿಲ್ಲಾಡಳಿತದಿಂದ ಕೋವಿಡ್ ಕಾರ್ಯಕ್ಕೆ ಕರೆ ಬಂದಾಗ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಸದಾ ಸಿದ್ಧರರಾಗಿರಬೇಕು ಎಂದು ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜೇಂದರ್ ಮಲಿಕ್ ಅವರು ಹೇಳಿದರು.
34 ಕರ್ನಾಟಕ ಬಟಾಲಿಯನ್ ಎನ್ ಸಿ ಸಿ ಬಳ್ಳಾರಿ ವತಿಯಿಂದ ಬುಧವಾರ 34 ಕರ್ನಾಟಕ ಬಟಾಲಿಯನ್ನಲ್ಲಿ ನಡೆದ ಎನ್ ಸಿ ಸಿ ಅಧಿಕಾರಿಗಳ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಚಟುವಟಿಕೆಗಳಾದ, ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ನಿರ್ಮಲೀಕರಣ, ಹಾಗು ಇನ್ನಿತರ ಸಾಮಾಜಿಕ ಚಟುವಟಿಕೆಗಳ ಕುರಿತು ಹಾಗು ಪ್ರಸ್ತುತ ಕೋವಿಡ್-19 ಮಹಾಮಾರಿಯಿಂದ ಸುರಕ್ಷತೆಯನ್ನು ಕಾಪಾಡುವುದರ ಬಗ್ಗೆ ಮಾತನಾಡಿದರು.
ವಿನೂತನ ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಂಡು ಎನ್ ಸಿ ಸಿ ಕೆಡೆಟ್ಗಳಲ್ಲಿ ಹೊಸ ಹುಮ್ಮಸ್ಸನ್ನು, ಪ್ರೇರಣೆಯನ್ನು ತುಂಬಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್ಸಿಸಿಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.