Wednesday, August 10, 2022

Latest Posts

ಕೋವಿಡ್ ಗುಣಮುಖ ಸಿಬ್ಬಂದಿಗೆ ನ್ಯಾಯಮೂರ್ತಿ ಗಳಿಂದ ಸನ್ಮಾನ

ಕಲಬುರಗಿ: ಕೋವಿಡ್ -19 ಸೋಂಕಿಗೊಳಗಾಗಿ ಕಲಬುರಗಿ ಬುದ್ಧವಿಹಾರ ಕ್ವಾರಾಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕರ್ನಾಟಕ ಉಚ್ಛ ನ್ಯಾಯಾಲಯ, ಕಲಬುರಗಿ ಪೀಠದ ಸಿಬ್ಬಂದಿಯೊಬ್ಬರಿಗೆ ಹೈಕೋರ್ಟ್ ನ ಗೌರವಾನ್ವಿತ ಹಿರಿಯ ನ್ಯಾಯಮೂರ್ತಿಗಳಾದ ಶ್ರೀ ಬಿ.ಎ.ಪಾಟೀಲ್ ಅವರು ಹೂ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು ಮಾಸ್ಕ್, ಸ್ಯಾನಿಟೈಜರ್ ಗಳ ಬಳಸುವ ಮೂಲಕ ಸುರಕ್ಷತಾ ಕ್ರಮಗಳ ಅನುಸರಿಸಿದರೆ ಕೈರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂದು ಸಲಹೆ ನೀಡಿದರು. ಯಾವುದೇ ಆತಂಕಕ್ಕೊಳಗಾಗದೆ ಕೆಲಸ ನಿರ್ವಹಿಸಿ ಎಂದು ಸಿಬ್ಬಂದಿಗೆ ಅವರು ಈ ಸಂದರ್ಭದಲ್ಲಿ ಧೈರ್ಯ ತುಂಬಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss