Monday, July 4, 2022

Latest Posts

ಕೋವಿಡ್ ಚಿಕಿತ್ಸಾ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ‌ ಮಾಡುವುದು ವಿಪಕ್ಷನಾಯಕರ ಅಭ್ಯಾಸ: ಸಚಿವ ಸೋಮಣ್ಣ

ತುಮಕೂರು: ಕೊವಿಡ್ ಚಿಕಿತ್ಸೆಯ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಕ್ರಮಣ ನಡೆದಿದೆ ಎಂದು ಹಿಟ್ ಅಂಡ್ ರನ್ ಆರೋಪ ಮಾಡುವುದು ವಿಪಕ್ಷನಾಯಕರಿಗೆ ಅಭ್ಯಾಸ ವಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದರು.

ಸಿದ್ಧಗಂಗ ಮಠದಲ್ಲಿ ಸುದ್ದಿಗಾರರಿಗೆ ಜೊತೆ ಮಾತನಾಡುತ್ತಿದ್ದ ಅವರು ವಿಪಕ್ಷನಾಯಕರಿಗೆ ನಾಯಕರಾದ ಅವರಿಗೆ ಖರೀದಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ವಿದೆ ಮುಖ್ಯ ಮಂತ್ರಿಗಳೂ ಇದೆ ಮಾತನ್ನು ಹೇಳಿದ್ದಾರೆ. ಆದರೆ ಅವರು ವಿಧಾನ ಸೌಧಕ್ಕೆ ಬಂದು ದಾಖಲೇ ಪರಿಶೀಲಿಸದೆ ಆಧಾರರಹಿತ ಮಿಥ್ಯಾರೋಪಗಳನ್ನು ಮಾಡುತ್ತಿದ್ದುದು ಇದು ಸರಿಯಾದ ಕ್ರಮವಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕು ಅದು ಬಿಟ್ಟು ಎಲ್ಲೋ ಕುಳಿತು ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಅವರ ಇಂತಹ ಆರೋಪಗಳ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುವುದಿಲ್ದ ಎಂದರು. ಇಂತಹ ಆರೋಪಗಳು ಜನರ ನೆಮ್ಮದಿ ಹಾಳುಮಾಡುತ್ತವೇ ಅಷ್ಟೇ ಎಂದರು. ತುಮಕೂರು ಜಿಲ್ಲಾಉಸ್ತುವಾರಿ ಸಚಿವರ ಸ್ಥಾನ ಖಾಲಿ ಇಲ್ಲ, ಖಾಲಿ ಇರದ ಸ್ಥಾನದಲ್ಲಿದೆ ಬಗ್ಗೆ ನಾನು ಆಸೆ ಪಡುವುದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss