ಹೊಸದಿಗಂತ ವರದಿ ಬಳ್ಳಾರಿ:
ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊಸಪೇಟೆ ನಗರದಲ್ಲಿ ತಂಗಿದ್ದ ಅವರು ಕೋವೀಡ್ ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸೋಮವಾರ ಸಾಂತ್ವನ ಹೇಳಿದರು.
ಹೊಸಪೇಟೆ ನಗರದ ಅಲ್ಪಸಂಖ್ಯಾತ ಪ್ರಭಾವಿ ಮುಖಂಡ ಫೋಯುಂ ಪಾಷಾ ಅವರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿ ಕೊವೀಡ್ ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಪಕ್ಷದ ವಿವಿಧ ಗಣ್ಯರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು