Monday, July 4, 2022

Latest Posts

ಕೋವಿಡ್ ನಿಯಂತ್ರಣದಲ್ಲಿ ಕಾರ್ಯಪಡೆಗಳ ಪಾತ್ರ ಮುಖ್ಯ : ಸಚಿವ ಸುಧಾಕರ್

ಚಿಕ್ಕಬಳ್ಳಾಪುರ : ಕೋವಿಡ್ ನಿಯಂತ್ರಣ ವಿಷಯದಲ್ಲಿ ಬೂತ್ ಮಟ್ಟದಲ್ಲಿ ರಚಿಸಿರುವ ಕಾರ್ಯಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದರು. ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅವರು ನೀಡಿದರು.
ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇರುವ ದೂರುಗಳ ಬಗ್ಗೆ ಗಮನಹರಿಸಬೇಕು. ಮೂಲಸೌಕರ್ಯ ಗಳ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಸೋಲಾರ್ ಸಮಸ್ಯೆ ಇರುವ ಕಡೆ ಗೀಜರ್ ಅಳವಡಿಸಬೇಕು ಎಂದು ಸೂಚನೆ ನೀಡಿದರು.|
ಕೊವಿಡ್ ನಿಂದ ಗುಣಮುಖರಾದವರು ಸಹ ಎಚ್ಚರಿಕೆಯಿಂದ ಇರಬೇಕು, ಎರಡೇ ತಿಂಗಳಲ್ಲಿ ಸೋಂಕು ಮರುಕಳಿಸಿದ ನಿದರ್ಶನಗಳಿವೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಾಸ್ಕ್ ಬಳಕೆ ಕಡ್ಡಾಯಗೊಳಿಸಬೇಕು ಎಂದು ಸಲಹೆ ನೀಡಿದರು.
ಜ್ವರ, ಶೀತ ಇತರೆ ಲಕ್ಷಣಗಳು ಇರುವವರಿಗೆ ತಕ್ಷಣ ಟೆಸ್ಟ್ ಮಾಡಿಸಬೇಕು. ಹೆಚ್ಚೆಚ್ಚು ಟೆಸ್ಟ್ ಆಗಿ ಸೋಂಕು ಪ್ರಮಾಣ ಹೆಚ್ಚಾದರೂ ಗಾಬರಿ ಬೇಡ. ಚಿಕಿತ್ಸೆ ಸಿಕ್ಕರೆ ಗುಣಮುಖ ರಾಗುತ್ತಾರೆ. ಸಾವಿನ ಪ್ರಮಾಣ ಕಡಿಮೆ ಮಾಡುವ ಕಡೆ ಗಮನಕೊಡಿ, ತಕ್ಷಣ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿ, ಪ್ರತಿದಿನ ಡೆತ್ ಆಡಿಟ್ ಮಾಡಬೇಕು. ಇದರಿಂದ ಸಾವಿನ ಕಾರಣಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೋವಿಡ್ ಯೇತರ ಡೆಂಗ್ಯು ಸಹಿತ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನಹರಿಸಬೇಕು. ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಒಟ್ಟು 98 ಡಯಾಲಿಸಿಸ್ ರೋಗಿಗಳ ರೋಗಿಗಳಿದ್ದಾರೆ. ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದ ಸಚಿವರ, ಕೋವಿಡ್ ಆಸ್ಪತ್ರೆಯಲ್ಲಿ ಒಂದು ಡಯಾಲಿಸಿಸ್ ಯಂತ್ರ ಅಳವಡಿಸಿ ಎಂದರು.
ಮಕ್ಕಳಿಗೆ ಕಡ್ಡಾಯವಾಗಿ ನೀಡುವ ಚುಚ್ಚುಮದ್ದು ನೀಡಿಕೆಯಲ್ಲಿ ಯಾವುದೇ ಲೋಪಗಳು ಆಗಬಾರದು. ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆ ಮೂಲಕ ನೀಡಿದ ಮೂರು ಸಾವಿರ ರೂ.ಭತ್ಯೆ ಪೂರ್ಣ ಪ್ರಮಾಣದಲ್ಲಿ ವಿತರಣೆ ಆಗಿರುವ ಬಗ್ಗೆ ವರದಿ ನೀಡಿ ಎಂದು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಎಚ್ಚರಿಕೆ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಅಲ್ಲಿಯೇ ವಾಸ್ತವ್ಯ ಮಾಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಅ.1 ರಿಂದ ಇಲ್ಲಿ ವಾಸ್ತವ್ಯವಿರದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು. ಈ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss