Wednesday, June 29, 2022

Latest Posts

ಕೋವಿಡ್ ನಿಯಂತ್ರಣ ಉಲ್ಲಂಘಿಸಿದ ಪರಿಣಾಮವನ್ನು ಕೇರಳ ಈಗ ಅನುಭವಿಸುತ್ತಿದೆ: ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್

ತಿರುವನಂತಪುರ: ಕೇರಳದಲ್ಲಿ ಜನಸಮೂಹವು ಕೋವಿಡ್ ನಿಯಂತ್ರಣಗಳನ್ನು ಉಲ್ಲಂಘಿಸಿದ ಪರಿಣಾಮವನ್ನು ಈಗ ಅನುಭವಿಸುತ್ತಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ. ಸಂಪೂರ್ಣ ನಿಯಂತ್ರಣದಲ್ಲಿದ್ದ ಕೊರೋನಾ ಸೋಂಕು ಈ ರೀತಿಯಾಗಿ ಪಸರಿಸಲು ಜನರ ನಿರ್ಲಕ್ಷ್ಯವೇ ಕಾರಣವಾಗಿದೆ. ಓಣಂ ಹಬ್ಬದ ತನಕ ಅಂಕುಶದಲ್ಲಿದ್ದ ರೋಗವು ಬಳಿಕದ ದಿನಗಳಲ್ಲಿ ಏಕಾಏಕಿಯಾಗಿ ವ್ಯಾಪಿಸಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಸಾವಿನ ಸಂಖ್ಯೆಯನ್ನು ಆದಷ್ಟು ಕಡಿಮೆ ಮಾಡುವುದಷ್ಟೇ ಸದ್ಯದ ಲಕ್ಷ್ಯವಾಗಿದೆ ಎಂದು ಸಚಿವೆ ಹೇಳಿದರು. ಕೊರೋನಾ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಯು ವಿಫಲವಾಗಿದೆ ಎಂದು ಕೆಲವರು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದ ಕೆ.ಕೆ.ಶೈಲಜಾ ಟೀಚರ್ ಅವರು, ರಾಜ್ಯ ಸರಕಾರದ ಉತ್ತಮ ವ್ಯವಸ್ಥೆಯಿಂದಾಗಿ ರೋಗವು ಇಷ್ಟಾದರೂ ನಿಯಂತ್ರಣಕ್ಕೆ ಬಂದಿದೆ ಎಂದರು.

ಈ ಮಧ್ಯೆ ಕಳೆದ ಕೆಲವು ದಿನಗಳಿಂದ ಕೇರಳದ ಕೆಲವು ಜಿಲ್ಲೆಗಳಲ್ಲಿ ಹೊಸ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಅವರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು.
ಕೋವಿಡ್ ನಿಂದ ಮರಣ ಸಂಭವಿಸುವ ಪ್ರಮಾಣವನ್ನು ಕಡಿಮೆ ಮಾಡುವುದು ಸರಕಾರದ ಈಗಿನ ಮುಖ್ಯ ಗುರಿಯಾಗಿದೆ. ಕಠಿಣ ನಿಯಂತ್ರಣಗಳ ಹೊರತಾಗಿಯೂ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣವು ಏರುಗತಿಯಲ್ಲಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕರು ಗರಿಷ್ಠ ಎಚ್ಚರಿಕೆ ವಹಿಸಬೇಕು. ಕೋವಿಡ್ ವೈರಸ್ ಸೋಂಕನ್ನು ಸಂಪೂರ್ಣವಾಗಿ ಇಲ್ಲದಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಆಶಿಸಿದರು. ಆರೋಗ್ಯ ಇಲಾಖೆಯ ನಿರಂತರ ಶ್ರಮ ಹಾಗೂ ಕಟ್ಟುನಿಟ್ಟಿನ ಕ್ರಮಗಳಿಂದ ಈ ಮಟ್ಟವನ್ನಾದರೂ ಕಾಯ್ದುಕೊಳ್ಳಲು ಸಾಧ್ಯವಾಯಿತೆಂದು ಸಚಿವೆ ಬೊಟ್ಟುಮಾಡಿದರು. ಅರೋಗ್ಯ ವಿಚಾರಕ್ಕೆ ಸಂಬಂಧಿಸಿ ಯಾವುದೇ ನ್ಯೂನತೆಗಳಿದ್ದಾಗ ಅವುಗಳನ್ನು ಗಂಭೀರವಾಗಿ ಇಲಾಖಾ ಮಟ್ಟದಲ್ಲೇ ಚರ್ಚಿಸಿ ಪರಿಹರಿಸಲಾಗುತ್ತಿದೆ ಎಂದೂ ಅವರು ಇದೇ ಸಂದರ್ಭ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss