Wednesday, July 6, 2022

Latest Posts

ಕೋವಿಡ್ ನೀತಿ ಸಂಹಿತೆ: ಕೊಡವ ಸಾಹಿತ್ಯ ನಮ್ಮೆ ಮುಂದೂಡಿಕೆ

ಮಂಗಳೂರು: ಐಚೆಟ್ಟರ ಮಾ. ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ಜನ್ಮದಿನೋತ್ಸವದ ಹಿನ್ನಲೆ ನಡೆಯಬೇಕಿದ್ದ ಸಾಹಿತ್ಯ ನಮ್ಮೆಯನ್ನು ಮುಂದೂಡಲಾಗಿದೆ ಎಂದು ಕೊಡವಾಮೆರ ಕೊಂಡಾಟ ಕೂಟವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅಂತರ್ಜಾಲದಲ್ಲಿ ಆಯೋಜಿಸಿದ್ದ ತ್ರಿಭಾಷಾ ಸ್ಪರ್ಧೆಯನ್ನು ಅಂತಿಮವಾಗಿ ವಿರಾಜಪೇಟೆಯಲ್ಲಿ ನಡೆಸಲು ತೀರ್ಮಾನಿಸಿತ್ತು. ಆದರೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಸರ್ಕಾರದ ನಿಯಮದಂತೆ ನ.22ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಐ.ಮಾ.ಮುತ್ತಣ್ಣ ಹಾಗೂ ಬಿ.ಡಿ. ಗಣಪತಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕಾರ್ಯಕ್ರಮ ಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಕೊಡವಾಮೆರ ಕೊಂಡಾಟ ಕೂಟ ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss