ಬಾಗಲಕೋಟೆ: ಕೋವಿಡ್-೧೯ ಗೆ ಸಂಬಂಧಿಸಿದ ಸಾಮಾಗ್ರಿಗಳ ಖರೀದಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ತಿಳಿಸುವ ಮುನ್ನ ಸರ್ಕಾರ ಕೂಡಲೇ ಸದನ ಸಮಿತಿ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ, ಗ್ರಾಮೀಣ ದಲ್ಲಿ ಹೆಚ್ಚು ಸೋಂಕು ಇರುವ ಕಾರಣ ಅಧಿವೇಶನ ನಡೆಸುವುದು ಕಷ್ಟ ಸಾಧ್ಯ ಹೀಗಾಗಿ ಮುಖ್ಯಮಂತ್ರಿ ಗಳು ಸದನ ಸಮಿತಿ ರಚಿಸಿ ಕೋವಿಡ್-೧೯ ಸಾಮಾಗ್ರಿಗಳ ಖರೀದಿ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಪಡಿಸಿದರು.
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಹೀಗಾಗಿ ಸರ್ಕಾರ ಕೂಡಲೇ ಹೈದ್ರಾಬಾದ್ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕದಲ್ಲಿ ೫೦೦೦ ಸಾಮರ್ಥ್ಯ ಇರುವ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂದರು.
ಕೊರೋನಾ ಸೋಂಕು ಹರಡುತ್ತಿರುವುದರಿಂದ ಬೆಂಗಳೂರ ನಗರಕ್ಕೆ ಜನ ಅಲೆದಾಡಿಸುವುದನ್ನು ತಪ್ಪಿಸಬೇಕಾಗಿದೆ. ಉತ್ತರ ಕರ್ನಾಟಕದ ಶಿಕ್ಷಣ,ಆರೋಗ್ಯಕ್ಕೆ ,ಶುಗರ್ ಸೇರಿದಂತೆ ಇನ್ನಿತರ ಇಲಾಖೆಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ವರ್ಗಾಯಿಸಬೇಕು. ಮಂತ್ರಿಗಳಾದಿಯಾಗಿ ಇಲಾಖೆಗಳನ್ನು ವರ್ಗಾಯಿಸಬೇಕು ಎಂದು ತಿಳಿಸಿದರು.
ಕೋರೋನಾ ಸೋಂಕು ನಿಯಂತ್ರಣ ಮಾಡಲು ಸರ್ಕಾರ ವಿಫಲವಾಗಿದೆ. ವಿದೇಶದಿಂದ ಬರುವವರನ್ನು ಮುಂಚೆಯೇ ನಿಲ್ದಾಣದಲ್ಲಿ ನಿಲ್ಲಿಸಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಸೂಚಿಸಿದ್ದಾರೆ ಭಾರತಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದರು. ಬಾಗಲಕೋಟೆ ಕೋವಿಡ್-೧೯ ಆಸ್ಪತ್ರೆಗೆ ಭೇಟಿನೀಡಿ ಅಲ್ಲಿಯ ಸಮಸ್ಯೆಗಳನ್ನು ಸರಿಪಡಿಸಲು ಸರ್ಜನ್ ಅವರಿಗೆ ತಿಳಿಸಲಾಗಿದೆ ಎಂದರು.
ಕೋವಿಡ್-೧೯ ಗೆ ಸಂಬಂಧಿಸಿದಂತೆ ಒಂದೊಂದು ಮಂತ್ರಿಗಳು ತಮಗೆ ಇಷ್ಟಬಂದಂತೆ ಹೇಳಿಕೆಕೊಡುತ್ತಿದ್ದಾರೆ. ಮಂತ್ರಿಗಳಲ್ಲಿ ಸಮನ್ವಯತೆ ಕೊರತೆ ಇದೆ ಎಂದು ಹೇಳಿದರು.