ಬೆಂಗಳೂರು: ಕೋವಿಡ್ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ವಿಕ್ರಮ್ ಆಸ್ಪತ್ರೆ ಪಡೆಯುತ್ತಿದೆ ಎಂಬ ದೂರು ಕೇಳಿಬರುತ್ತಿತ್ತು, ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಹೆಚ್ಚಿಗೆ ಹಣ ತೆಗೆದು ಕೊಳ್ಳುತ್ತಿರುವುದು ದೃಢ ಪಟ್ಟಿತ್ತು.
ಹೆಚ್ಚುಗೆ ಹಣ ತೆಗೆದು ಕೊಳ್ಳುತ್ತಿರುವುದನ್ನು ಒಪ್ಪಿಕೊಂಡ ವಿಕ್ರಮ್ ಆಸ್ಪತ್ರೆ ಇನ್ನು ಮುಂದೆ ಸರ್ಕಾರ ನಿಗದಿ ಮಾಡಿದಷ್ಟೇ ಹಣವನ್ನು ಪಡೆಯುವುದಾಗಿ ಮತ್ತು ಇದುವರೆಗೂ ಪಡೆದ ಹೆಚ್ಚಿಗೆ ಹಣವನ್ನು ಹಿಂತಿರುಗಿಸುವುದಾಗಿ ತಿಳಿಸಿದೆ.
ಇದುವರೆಗೂ ಕೊರೋನಾ ಪರೀಕ್ಷೆಯಲ್ಲಿ ವಸೂಲಿ ಮಾಡಿದ ಹೆಚ್ಚುವರಿ ಹಣವನ್ನೂ ವಾಪಸ್ ಮಾಡುವುದಾಗಿ ಖಾಸಗಿ ಆಸ್ಪತ್ರೆಗಳ ಹಿರಿಯ ಉಸ್ತುವಾರಿ ಐಎಎಸ್ ಅಧಿಕಾರಿ ತಿಳಿಸಿದ್ದಾರೆ.