Tuesday, July 5, 2022

Latest Posts

ಕೋವಿಡ್ ಪರೀಕ್ಷೆ ತೃಪ್ತಿಕರವಲ್ಲ: ತೆಲಂಗಾಣ, ಮಹಾರಾಷ್ಟ್ರಭೇಟಿ ನೀಡಿದ್ದ ಕೇಂದ್ರ ತಂಡ ಕಳವಳ

ಹೊಸದಿಲ್ಲಿ:  ಕೊರೋನಾ ಪೀಡಿತ ಕೆಲ ರಾಜ್ಯಗಳಲ್ಲಿ ಸೋಂಕಿತರ ಪರೀಕ್ಷಾ ವಿಧಾನವೇ ಸರಿಯಲ್ಲ ಎಂದು ತಜ್ಞರ  ತಂಡ  ಕಳವಳ  ವ್ಯಕ್ತಪಡಿಸಿದೆ.
  ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ರಾಜಾಸ್ಥಾನದಲ್ಲಿ   ವ್ಯಾಪಕವಾಗಿ  ಸಂಚರಿಸಿದ ತಂಡ,  ಈ  ದಿಶೆಯಲ್ಲಿ  ವರದಿಯೊಂದನ್ನು ಸಿದ್ಧಪಡಿಸಿದೆ.   ಸೋಂಕಿತರನ್ನು  ಪರೀಕ್ಷೆಗೆ  ಒಳಪಡಿಸುವ  ಸಲಕರಣೆಗಳು  ಸರಿಯಿಲ್ಲ. ಮಿಗಿಲಾಗಿ    ಸೋಂಕಿತರನ್ನು  ಪರೀಕ್ಷೆಗೆ ಗುರಿಪಡಿಸುವ ವೈದ್ಯರಿಗೇ  ಕೇಂದ್ರ ಸರ್ಕಾರದ  ಮಾರ್ಗಸೂಚಿ  ಸರಿಯಾಗಿ ತಿಳಿದಿಲ್ಲ.    ವೈದ್ಯರು   ನಡೆಸುವ  ಪರೀಕ್ಷಾ ಪದ್ಧತಿಯನ್ನು ಗಮನಿಸಿದರೆ  ಇನ್ನೂ  ಸೋಂಕು  ಹೆಚ್ಚಾಗಲಿದೆಯೆ  ಎಂಬ  ಭೀತಿಯನ್ನು  ಹುಟ್ಟುಹಾಕುತ್ತದೆ  ಎಂದು  ತಂಡ  ಹೇಳಿದೆ.
ಸೋಂಕಿತರಿಂದ  ಪಡೆದ  ಸ್ಯಾಂಪಲ್‌ಗಳನ್ನು  ನಿರ್ದಿಷ್ಟ  ತಾಪಮಾನದಲ್ಲಿ ಶೇಖರಿಸಿಡಬೇಕು. ಅವುಗಳನ್ನು   ಪ್ರಯೋಗಾಲಯಕ್ಕೆ  ರವಾನಿಸುವಾಗಲೂ ಅದೇ  ತಾಪಮಾನ ನಿರ್ವಹಣೆಯಾಗಬೇಕು.   ಆತಂಕದ  ಸಂಗತಿ ಎಂದರೆ  ಸೋಂಕಿತರನ್ನು  ಪರೀಕ್ಷಿಸಬೇಕಾದ  ವೈದ್ಯರು  ಮತ್ತು ದಾದಿಯರೇ  ಕೆಲವರು  ಸೋಂಕಿನಿಂದ ಪರಿತಪಿಸಿದ್ದಾರೆಂದು  ತಜ್ಞರ   ತಂಡ  ಆಕ್ಷೇಪಿಸಿದೆ.  ಕ್ವಾರಂಟೈನ್ ಮತ್ತು ಶುಭ್ರತೆ, ಸೋಂಕಿತರಿಗೆ  ಚಿಕಿತ್ಸೆ ನೀಡುವ  ವಿಧಾನವಂತೂ  ತೃಪ್ತಿದಾಯಕವಾಗಿಲ್ಲ ಎಂದು  ಆಕ್ಷೇಪಿಸಿದೆ.
   ಹತ್ತು  ದಿನಗಳ ಹಿಂದೆಯಷ್ಟೇ  ದಿಲ್ಲಿಯಿಂದ  ಹೊರಟ  ತಂಡ  ಹೈದರಾಬಾದ್, ಜೈಪುರ, ಮುಂಬೈ ಹಾಗೂ  ಪುಣೆ   ನಗರಗಳಿಗೆ   ಭೇಟಿ  ನೀಡಿ   ಮಾಹಿತಿ  ಕಲೆ ಹಾಕಿದೆ.  ಈ  ತಂಡದಲ್ಲಿ   ಐಸಿಎಂಅರ್ ಮತ್ತು ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ   ಸೇವೆ  ಸಲ್ಲಿಸುತ್ತಿರುವ  ಹಿರಿಯ  ವೈದ್ಯರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss