Monday, August 8, 2022

Latest Posts

ಕೋವಿಡ್ , ಪ್ರವಾಹ ದಂತಹ ಸಂಕಷ್ಟಗಳ ನಡುವೆಯೂ ಅಭಿವೃದ್ಧಿ ಪಥದಲ್ಲಿ ರಾಜ್ಯ ಸರ್ಕಾರ: ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು: ಕೋವಿಡ್ , ಪ್ರವಾಹ ದಂತಹ ಸಂಕಷ್ಟಗಳ ನಡುವೆಯೂ ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತುಮಕೂರು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸವಾಲುಗಳನ್ನು ಒಂದು ವರ್ಷ -ಪರಿಹಾರದ ಸ್ಪರ್ಶ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಕೊವಿಡ್ ನಂತಹ ಪಿಡುಗು ಇಲ್ಲದಿದ್ದರೆ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳುತ್ತಿದ್ದವು ಎಂದರು.
ಮುಖ್ಯ ಮಂತ್ರಿಗಳು ತಮ್ಮ ರಾಜಕಾರಣದ ಅನುಭವದಿಂದ ಕೊವಿಡ್ ನಿಯಂತ್ರಣ ಸಾಧ್ಯವಾಗಿದೆ. ರಾಜ್ಯ ದ ಜನರ ಹಿತವನ್ನಷ್ಟೇ ಪ್ರಮುಖ ಗುರಿಯಾಗಿಟ್ಟುಕೊಂಡು ಕರೊನ ವಿರುದ್ಧ ಹೊರಾಟವನ್ನು ಮುಖ್ಯ ಮಂತ್ರಿಗಳು ರೂಪಿಸಿರುವ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ವೈದ್ಯರು ವೈದ್ಯಕೀಯ ಸಿಬ್ಬಂದಿ ನೆರವಿನಿಂದ ಅನುಷ್ಠಾನಗೊಳಿಸಲು ಪ್ರಯತ್ನಿಸಿ ಸಫಲರಾದರು ಎಂದರು.
ಕೈಗಾರಿಕಾ ಅಭಿವೃದ್ಧಿಗೆ ಕಾನೂನಾತ್ಮಕವಾಗಿ ಹಲವು ಬದಲಾವಣೆಗಳನ್ನು ತರಲಾಗಿದೆ, ದುಡಿಯುವ ಮಹಿಳೆಯರ ಬಗ್ಗೆಯೂ ಚಿಂತನೆ ಮಾಡಿ ಅಂಗಡಿ ಮತ್ತು ಸ್ಥಾಪನೆ ಕಾಯಿದೆ ತರಲಾಗಿದೆ ಎಂದರು.
ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. ಜಿಲ್ಲೆಗಳನ್ನಾಗಿ ಮಾಡಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವವರಿಗೆ ಸಬ್ಸಿಡಿ ರಿಯಾಯಿತಿ ದೊರೆಯುವಂತೆ ಮಾಡಲಾಗಿದೆ ಎಂದರು. ಜವಳಿಜವಳಿ ನೀತಿ, ಎಪಿಎಂಸಿ ಕಾಯಿಲೆಗೆ ತಿದ್ದುಪಡಿ ಮಾಡಲಾಗಿದೆ. ಕೃಷಿಕ ರಲ್ಲದವರು ಕೃಷಿಭೂಮಿ ಖರೀದಿಗೆ ಭೂಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ಕಡಿವಾಣ ಹಾಕಲಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳ ಅಭಿ ವೃದ್ಧಿಯಾದ ಮಾಡಲಾಗಿದೆ ಎಂದರು. ಎತ್ತಿನಗಾಡಿಯನ್ನು ಹೊಳೆ ಯೋಜನೆ ,ರೈಲ್ವೆ ಯೋಜನೆಗಳ ಅನುಷ್ಠಾನಗೊಳಿಸಲು ಶ್ರಮಿಸಲಾಗುತ್ತಿದೆ.ತುಮಕೂರು ಜಿಲ್ಲೆಗೆ ಹೆಚ್ಚಿನ ಹೇಮಾವತಿ ನೀರು ಹೊರಡಿಸಲು 0-70ಕಿಮಿ ವರೆಗೆ ನಾಲೆಗಳನ್ನು ಅಗಲೀಕರಣ ಮಾಡಲಾಗಿದೆ ಅದೇ ರೀತಿ 70-160 ಕಿಮೀ ವರೆಗಿನ ನಾಲೆಯ ಅಗಲೀಕರಣ ಆಧುನಿಕರಣ ಮಾಡಲಾಗುತ್ತಿದ್ದು ಇದಕ್ಕಾಗಿ 500ಕೋಟಿ
ರೂಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರು.
ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಅದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದರು. ಆದ್ದರಿಂದ ರೋಗಲಕ್ಷಣಗಳು ಕಂಡ ಕೊಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss