spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಕೋವಿಡ್ ರೋಗಿಗಳಿಗಾಗಿ 1 ಲಕ್ಷ ಮೆ.ಟನ್ ಆಮ್ಲಜನಕ ಆಮದು: ಕೇಂದ್ರ ತೀರ್ಮಾನ

ದಿಲ್ಲಿ: ಅಸ್ತಮಾದಂತಹ ಉಸಿರಾಟ ಸಮಸ್ಯೆಗಳು, ಹೃದ್ರೋಗ ಕೂಡ ಚಳಿಗಾಲದಲ್ಲಿ ಗಂಭೀರವಾಗಿ ಕಾಡುವುದು ಸಹಜ. ತಜ್ಞರ ಪ್ರಕಾರ ಚಳಿಗಾಲದಲ್ಲಿ ಕೋವಿಡ್ ಹಾವಳಿ ಜಾಸ್ತಿಯಾಗಲಿದೆ. ಹಾಗಾಗಿ ಆಮ್ಲಜನಕಕ್ಕೆ ಬೇಡಿಕೆಯೂ ಸಹಜವಾಗೇ ಹೆಚ್ಚಾಗುವ ಸಾಧ್ಯತೆ ಇದೆ. ತುರ್ತು ಸನ್ನಿವೇಶಗಳಲ್ಲಿ ರೋಗಿಗಳಿಗೆ ಆಮ್ಲಜನಕದ ಯಾವುದೇ ಕೊರತೆ ಕಾಡದಿರಲೆಂದು ೧ಲಕ್ಷ ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ತೀರ್ಮಾನಿಸಿದೆ.
ಕೇಂದ್ರ ಆರೋಗ್ಯ ಖಾತೆ ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ನಡೆಸಿದ್ದು, ಖಾತೆಯ ಪರವಾಗಿ ಸಾರ್ವಜನಿಕ ರಂಗದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಜಾಗತಿಕ ಟೆಂಡರ್ ಆಹ್ವಾನಿಸಿದೆ. ಹೀಗೆ ಆಮದು ಮಾಡಿಕೊಂಡ ಆಮ್ಲಜನಕವನ್ನು ಕೇಂದ್ರ ಮತ್ತು ರಾಜ್ಯ ಸರಕಾರಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುವುದು. ಮೆಡಿಕಲ್ ಆಮ್ಲಜನಕ ಆಮದು ಮತ್ತು ಹಂಚಿಕೆ ಪ್ರಕ್ರಿಯೆಗೆ ಅಂದಾಜು ೬೦೦-೭೦೦ ಕೋ.ರೂ.ವೆಚ್ಚ ತಗುಲುವುದು ಎಂದು ಅಕೃತ ಮೂಲಗಳು ತಿಳಿಸಿವೆ.
ಮಂಗಳವಾರ ತನಕ ದೇಶದಲ್ಲಿ ಸುಮಾರು ಶೇ.೩೪ ಕೋವಿಡ್ ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದಾರೆ.ಶೇ.೨.೪ ರೋಗಿಗಳು ಐಸಿಯುನಲ್ಲಿದ್ದು ಇವರಿಗೂ ಆಮ್ಲಜನಕದ ಅವಲಂಬನೆ ಅನಿವಾರ್ಯ. ಚಳಿಗಾಲದಲ್ಲಿ ಈ ತೆರ ರೋಗಿಗಳ ಸಂಖ್ಯೆ ಜಾಸ್ತಿಯಾಗುವ ಆತಂಕವಿರುವ ಕಾರಣ, ಅಗತ್ಯವಾದ ವೈದ್ಯಕೀಯ ಆಮ್ಲಜನಕ ಆಮದಿನ ಮೂಲಕ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ಕೇಂದ್ರ ಸರಕಾರ ಸರ್ವ ತಯಾರಿ ನಡೆಸಿದೆ.

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap