Wednesday, August 10, 2022

Latest Posts

ಕೋವಿಡ್ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ದುರ್ದೈವದ ಸಂಗತಿ: ಸಿ.ಟಿ. ರವಿ

ಹೊಸದಿಗಂತ ವರದಿ,ಉಡುಪಿ:

ಕೋವಿಡ್ ಲಸಿಕೆಯ ಬಗ್ಗೆಯೂ ಕೆಲವು ಪಕ್ಷಗಳು ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ. ಜನರ ಆರೋಗ್ಯದ ದೃಷ್ಟಿಗಿಂತ ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದೇ ಷಡ್ಯಂತ್ರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಧಾನಮಂತ್ರಿಯವರ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ, ನಂತರ 50ವರ್ಷ ಮೇಲ್ಪಟ್ಟರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಿ ಲಸಿಕೆ ಕೊಡುವ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಜನರು ಕೋವಿಡ್ ಲಸಿಕೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ ಕೆಲವು ಪಕ್ಷಗಳು ತಾನು ಮಾಡುವುದಿಲ್ಲ, ಮಾಡುವವರಿಗೂ ಬಿಡಲ್ಲ ಅನ್ನುವ ಮನಸ್ಥಿತಿಯನ್ನು ಬದಲಿಸಬೇಕು. ಇಲ್ಲದಿದ್ದರೆ ಅವರನ್ನು ಜನರು ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದು ಸಿ.ಟಿ. ರವಿ ಎಚ್ಚರಿಸಿದರು.

ನಮ್ಮ ದೇಶದಲ್ಲಿ ಲಸಿಕೆ ತಯಾರಾದರೆ ಅವರಿಗೆ ನಂಬಿಕೆಯೇ ಇಲ್ಲ, ನಮ್ಮ ವಿಜ್ಞಾನಿಗಳ ಮೇಲೆಯೂ ವಿಶ್ವಾಸವಿಲ್ಲ. ಆದರೆ ಅದು ಇಟಲಿಯಿಂದ ಬಂದಿದ್ದರೆ, ಬರುವ ಮೊದಲೇ ಬಹಳ ಒಳ್ಳೆಯದು ಎನ್ನುವ ಸರ್ಟಿಫಿಕೇಟ್ ಕೊಡುತ್ತಿದ್ದರು‌. ಇಟೆಲಿ, ಚೀನಾದಿಂದ ಬಂದರೆ ಒಳ್ಳೆಯದು ಎನ್ನುವ ಮಾನಸಿಕ ಅವರದ್ದಾಗಿದೆ. ನಮ್ಮ ದೇಶದಲ್ಲಿ ತಯಾರಾಗಿದೆ ಎನ್ನುವ ಗೌರವವಿಲ್ಲ. ಅವರ ಈ ಮನಸ್ಥಿತಿಯ ಕಾರಣಕ್ಕೆ ಅವರು ಕಳೆದು ಹೋಗುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೇ ಸಿ.ಟಿ. ರವಿ ಕುಟುಕಿದರು.

ಯೋಗ್ಯತೆ ಎಲ್ಲರಿಗಿದೆ ಆದರೆ ಯೋಗ?ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ನನಗೆ ಇರುವ ಮಾಹಿತಿಯ ಪ್ರಕಾರ ನಾಳೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ. ಇನ್ನುಳಿದಿರುವುದು ಮುಖ್ಯಮಂತ್ರಿಯವರು ಹೇಳುತ್ತಾರೆ. ಬಿಜೆಪಿಯಲ್ಲಿ ಯೋಗ್ಯತೆ ಇರುವವರು ಬಹಳಷ್ಟು ಮಂದಿ ಇದ್ದಾರೆ, ಆದರೆ ಯಾರಿಗೆಲ್ಲ ಸಚಿವರಾಗುವ ಯೋಗ ಇದೆ ಎಂಬುದನ್ನು ನಾಳೆ ನೋಡೋಣ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss