Wednesday, August 17, 2022

Latest Posts

covid warriorsಗೆ 51 ಲಕ್ಷ ರೂ. ವಿಮೆ, ವಿಳಂಬವಿಲ್ಲದೆ ರಾಜ್ಯಗಳಿಗೆ ಹಣ: ನಿರ್ಮಲಾ ಸೀತಾರಾಂ

ಹೊಸದಿಲ್ಲಿ: ಕೊರೋನಾ ಸೋಂಕು ನಿವಾರಣೆ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಯಾವುದೇ ವಿಳಂಬವಿಲ್ಲದೆ ಕೇಂದ್ರ ಹಣವನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಐದು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ , ಅಂತಿಮ ಘಟ್ಟದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು.
ಭಾgತೀಯ ರಿಸರ್ವ್ ಬ್ಯಾಂಕ್ ನೀಡಿರುವ ಓವರ್ ಡ್ರಾಫ್ಟ್ ಮೂಲಕ ದೇಶದ ಎಲ್ಲ ರಾಜ್ಯಗಳಿಗೆ ಒಟ್ಟು 45,038 ಕೋಟಿ ರೂಪಾಯಿಗಳನ್ನು ಕೇಂದ್ರ ಬಿಡುಗಡೆ ಮಾಡಿದೆ. ವಿತ್ತೀಯ ಕೊರತೆ ತುಂಬಲು 12,390 ಕೋಟಿ ನೀಡಲಾಗಿದೆ. ಅಲ್ಲದೆ ಎನ್‌ಡಿ ಆರ್‌ಎಫ್ ನಿಧಿಯಿಂದ 11092 ಕೋಟಿ ರೂ. ನೀಡಲಾಗಿದೆ . ಇದಲ್ಲದೆ ರಾಜ್ಯಗಳಿಗೆ ಇನ್ನೂ 4.28 ಲಕ್ಷ ಕೋಟಿ ರೂ. ನೆರವು ಲಭ್ಯವಿದೆ. ಕೆಲವೊಂದು ರಾಜ್ಯಗಳಿಗೆ ನೀಡಲಾದ ಮೊತ್ತ ಸಮರ್ಪಕ ಪ್ರಮಾಣದಲ್ಲಿ ಬಳಕೆಯಾಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗ ನಿವಾರಣೆ ಕೇಂದ್ರ
ಪ್ರಧಾನಿ ಘೋಷಿಸಿರುವ ಬೃಹತ್ ಪ್ಯಾಕೇಜ್ ಮೊತ್ತದಲ್ಲಿ ದೇಶದ ಎಲ್ಲ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಹಚ್ಚುವ ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗುವುದು. ಇದರ ಜೊತೆಗೆ ಸಾಂಕ್ರಾಮಿಕ ರೋಗ ನಿವಾರಣೆ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಕೋವಿಡ್ ವಾರಿಯರ್ರ್‍ಸ್ ಗೆ 51 ಲಕ್ಷ ರೂ. ವಿಮೆ ಕಲ್ಪಿಸಲಾಗುವುದು. ಕಳೆದ ಎರಡು ತಿಂಗಳಿಂದ ದೇಶದ ವಿವಿಧ ರಾಜ್ಯಗಳಿಗೆ ಸುಮಾರು 51 ಲಕ್ಷ ಕೊರೋನಾ ರಕ್ಷಣಾ ಪರಿಕರ ಹಾಗೂ 87 ಲಕ್ಷ ಮಾಸ್ಕ್ ಅಲ್ಲದೆ 11.08 ಕೋಟಿ ಹೈಡ್ರಾಕ್ಸಿ ಕ್ಲೊ ರೋಕ್ವೀನ್ ಮಾತ್ರೆಗಳನ್ನು ವಿತರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!