ಕೋವಿಡ್ ವೀರರಿಗೆ ಸಾಥ್ ನೀಡಿದ ಭಾರತೀಯ ಬಾಲಕಿಗೆ ಟ್ರಂಪ್ ಸನ್ಮಾನ, ಭಲೇ ಭಾರತೀ.. !!

0
117

ವಾಷಿಂಗ್‌ಟನ್: ಅಮೆರಿಕದಲ್ಲಿ ಕೊರೋನಾ ರುದ್ರನರ್ತನವಾಡಿದಾಗ ಅಲ್ಲಿನ ನರ್ಸುಗಳು, ವೈದ್ಯರು ಹಾಗು ಅಗ್ನಿಶಾಮಕ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬಿದ ಭಾರತೀಯ ಬಾಲಕಿಗೆ ಡೊನಾಲ್ಡ್ ಟ್ರಂಪ್ ಸನ್ಮಾನಿಸಿದ್ದಾರೆ.
ಆಂಧ್ರದ ಮೂಲದ ಶ್ರವ್ಯ ಅನ್ನಪ್ಪರೆಡ್ಡಿ ಎಂಬ ಹತ್ತು ವರ್ಷದ ಬಾಲಕಿ ಮೇರಿಲ್ಯಾಂಡ್ ಪ್ರದೇಶದ ಎಲಿಮೆಂಟರಿ ಶಾಲೆಯಲ್ಲಿ ಓದುತಿದ್ದು ಒಂದು ತಿಂಗಳ ಹಿಂದೆ, ಈ ಬಾಲಕಿ ಕೋವಿಡ್ ವೀರರಿಗೆ ಕುಕ್ಕೀಸ್ ಮತ್ತು ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಗ್ರೀಟಿಂಗ್ ಕಾರ್ಡುಗಳನ್ನು ತಾನೇ ಖುದ್ದು ಹಂಚಿದ್ದಳು. ಇದು ಸಾಮಾಜಿಕ ತಾಣಗಳಲ್ಲಿ ಕೂಡಾ ಆಗ ವೈರಲ್ ಆಗಿತ್ತು. ತನ್ನ ಸ್ವಂತ ಖರ್ಚಿನಿಂದ ಈಕೆ ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ತಯಾರಿಸಿ ಕೋವಿಡ್ ಜಾಗೃತಿಗೆ ಟೊಂಕಕಟ್ಟಿದ್ದಳು. ಅಮೆರಿಕ ದೇಶ ಸಂಕಷ್ಟ ಕಾಲದಲ್ಲಿ ಭಾರತೀಯ ಪೋರಿ ಮಾಡಿದ ಕೆಲಸವನ್ನು ಟ್ರಂಪ್ ಅದ್ಭುತ ಎಂದು ಕೊಂಡಾಡಿದ್ದಾರೆ. ಇಂತಹ ಮಗುವಿನಿಂದ ಸೇವೆ ಎಂದರೆ ಏನೆಂಬುದು ಇಡೀ ಜಗತ್ತು ತಿಳಿಯಬೇಕಿದೆ ಎಂದು ಅವರು ಮುಕ್ತಕಂಠದಿಂದ ಹರಸಿದ್ದಾರೆ. ಶ್ವೇತಭವನದಲ್ಲಿ ಕೋವಿಡ್ ಯೋಧರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಭಾರತೀಯ ಬಾಲಕಿ ಸೇರಿದಂತೆ ಹತ್ತು ಮಕ್ಕಳನ್ನು ಸನ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here