ಕೋವಿಡ್- ಸೆಕೆಂಡ್ ಇನ್ನಿಂಗ್ಸ್ ಇದ್ದಂತೆ| ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಅನಿಲ್‌ಕುಂಬ್ಳೆ ವ್ಯಾಖ್ಯೆ

0
127
ಬೆಂಗಳೂರು: ಕೊರೋನಾ ಸೋಂಕು,  ಕ್ರಿಕೆಟ್ ಟೆಸ್ಟ್  ಪಂದ್ಯದಲ್ಲಿ  ಸೆಕೆಂಡ್  ಇನ್ನಿಂಗ್ಸ್ ಇದ್ದಂತೆ ಎಂದು  ಭಾರತೀಯ ಕ್ರಿಕೆಟ್ ತಂಡದ  ಮಾಜಿ  ನಾಯಕ  ಹಾಗೂ  ತರಬೇತುದಾರ  ಅನಿಲ್  ಕುಂಬ್ಳೆ    ವ್ಯಾಖ್ಯಾನಿಸಿದ್ದಾರೆ.
     ಇಡೀ  ವಿಶ್ವವನ್ನು ಪೀಡಿಸಿದ  ಕೊರೋನಾ  ಸೋಂಕಿನ  ಬಗ್ಗೆ  ಅವರು  ಮಾತನಾಡಿ,  ಇದು  ಐದು ದಿನಗಳ  ಕ್ರಿಕೆಟ್  ಟೆಸ್ಟ್ ಪಂದ್ಯದಲ್ಲಿ  ಎರಡನೆ   ಇನ್ನಿಂಗ್ಸ್  ಇದ್ದಂತೆ. ಮೊದಲ  ಇನ್ನಿಂಗ್ಸ್‌ನಲ್ಲಿ     ತಂಡ   ಎಷ್ಟು  ರನ್  ಗಳಿಸಿತೆಂಬುದು  ಮುಖ್ಯವಲ್ಲ.  ಎರಡನೆ  ಇನ್ನಿಂಗ್ಸ್‌ನಲ್ಲಿ  ತಂಡ ಯಾವ ರೀತಿ ಆಡುವುದೋ  ಅದರ ಮೇಲೆ  ಸೋಲು, ಗೆಲುವು  ನಿರ್ಧಾರವಾಗುತ್ತೆ. ಪಂದ್ಯವನ್ನು  ಗೆಲ್ಲಬೇಕಾದರೆ   ತಂಡ  ಎರಡನೆ ಇನ್ನಿಂಗ್ಸ್‌ನಲ್ಲಿ   ಕಠಿಣ    ಸನ್ನಿವೇಶಗಳನ್ನು   ಎದುರಿಸಬೇಕಾಗುತ್ತೆ  ಎಂದು    ಕುಂಬ್ಳೆ    ಮಾರ್ಮಿಕವಾಗಿ  ಹೇಳಿದ್ದಾರೆ.  ಸರ್ಕಾರ  ರೂಪಿಸಿರುವ   ಲಾಕ್‌ಡೌನ್ ನಿಯಮಾವಳಿಗಳನ್ನು  ಎಲ್ಲರೂ  ಕಟ್ಟುನಿಟ್ಟಾಗಿ  ಪಾಲಿಸಬೇಕಿದೆ ಎಂದ  ಅವರು   ಕೋವಿಡ್  ಯೋಧರ ಸೇವೆಯನ್ನು  ಮುಕ್ತಕಂಠದಿಂದ   ಪ್ರಶಂಸಿಸಿದ್ದಾರೆ.

LEAVE A REPLY

Please enter your comment!
Please enter your name here