Tuesday, September 22, 2020
Tuesday, September 22, 2020

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಕೋವಿಡ್ ಸೋಂಕು ತಗುಲಿ ಮೃತಪಟ್ಟ 109 ಶವ ಸಂಸ್ಕಾರ ನಡೆಸಿದ ಇವರೂ ಕೊರೋನಾ ವಾರಿಯರ್‍ಸ್!

sharing is caring...!

ಸುರೇಶ್ ಡಿ. ಪಳ್ಳಿ

ಮಂಗಳೂರು: ಜನತೆಯ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಿರುವ ಮಹಾಮಾರಿ ಕೊರೋನಾ ಭೀತಿ ಇನ್ನೂ ದೂರವಾಗಿಲ್ಲ. ದಿನೇ ದಿನೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಈ ನಡುವೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ದಿನಕ್ಕೆ ಕಡಿಮೆಯೆಂದರೂ ನಾಲ್ಕೈದು ಮೃತದೇಹಗಳು ಚಿತಾಗಾರ ತಲುಪುತ್ತಿವೆ.
ಸ್ಮಶಾನದಲ್ಲಿ ಮೃತದೇಹಗಳ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಸುವ ಸಿಬ್ಬಂದಿಗಳೂ ಕೊರೋನಾ ವಾರಿಯರ್‌ಗಳಂತೆಯೇ ಕೆಲಸ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನ ಬೋಳೂರು ಸ್ಮಶಾನದಲ್ಲಿ ನಾಲ್ಕು ಮಂದಿ ಸಿಬ್ಬಂದಿಗಳು ಈ ಕಾರ್ಯದಲ್ಲಿ ನಿರತರಾಗಿದ್ದು, ಇದುವರೆಗೆ ಕೋವಿಡ್ ಸೋಂಕು ತಗುಲಿ ಮೃತಪಟ್ಟ 109 ಮಂದಿಯ ಅಂತ್ಯ ಸಂಸ್ಕಾರವನ್ನು ಇವರೇ ಮುಂದೆ ನಿಂತು ನೆರವೇಸಿದ್ದಾರೆ.
ಕೃಷ್ಣಪ್ಪ ಗೌಡ, ಗಂಗಾಧರ, ನಾರಾಯಣ ಎಂ ಮತ್ತು ಚಿದಾನಂದ ಇವರುಗಳು ಸ್ಮಶಾನಕ್ಕೆ ಬರುವ ಇತರೆ ಮೃತದೇಹಗಳ ಜೊತೆಗೆ ಕೊರೋನಾ ಸೋಂಕು ತಗುಲಿ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಎಚ್ಚರಿಕೆಯಿಂದ ನಡೆಸುತ್ತಾ ಬರುತ್ತಿದ್ದಾರೆ.
‘ಕೊರೋನಾ ಎಂದಾಕ್ಷಣ ಆರಂಭದಲ್ಲಿ ಭಯ ಆತಂಕ ನಮ್ಮಲ್ಲೂ ಇತ್ತು. ಆದರೂ ನಮ್ಮ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿತ್ತು. ಮುಂಜಾಗೃತಾ ಕ್ರಮಗಳೊಂದಿಗೆ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುತ್ತಿದ್ದೆವು. ಆದರೆ ಆರಂಭದಲ್ಲಿ ಇದ್ದ ಭಯ ಈಗ ಇಲ್ಲ ’ ಎನ್ನುತ್ತಾರೆ ಮಂಗಳೂರಿನ ಬೋಳೂರು ಚಿತಾಗಾರದ ಮೇಲುಸ್ತುವಾರಿಯಾಗಿರುವ ಕೃಷ್ಣಪ್ಪ ಗೌಡ ಬೋಳೂರು.
ಎಪ್ರಿಲ್‌ನಿಂದ ಇದುವರೆಗೆ 106 ಮೃತದೇಹಗಳನ್ನು ವಿದ್ಯಾತ್ ಚಿತಾಗಾರದಲ್ಲಿ ಮತ್ತು 3 ಮೃತದೇಹಗಳನ್ನು ಕಟ್ಟಿಗೆ ಬಳಸಿ ಅಂತ್ಯಸಂಸ್ಕಾರ ನಡೆಸಿದ್ದೇವೆ. ಎಲ್ಲಾ ಸಿಬ್ಬಂದಿಗಳೂ ಕೋವಿಡ್ ನಿಯಮಗಳಂತೆಯೇ ಅಂತ್ಯ ಸಂಸ್ಕಾರದ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕೃಷ್ಣಪ್ಪಗೌಡ.
ಹೊಸ ಯೂನಿಫಾರ್ಮ್ ಬಿಸಾಡಿದ್ದೆವು!
‘ಕೊರೋನಾ ಬಗ್ಗೆ ಆರಂಭದಲ್ಲಿ ಎಲ್ಲೆಡೆ ಭಯದ ವಾತಾವರಣವಿತ್ತು. ನಾವೂ ಕೂಡ ಆತಂಕದಿಂದಲೇ ಕೆಲಸ ನಿರ್ವಹಿಸುತ್ತಿದ್ದೆವು. ಬೋಳೂರು ಸ್ಮಶಾನಕ್ಕೆ ಕೋವಿಡ್‌ನಿಂದ ಮೃತಪಟ್ಟ ಮೊದಲ ಮೃತದೇಹ ಬಂದ ದಿನ ನಾನು ಮತ್ತು ನನ್ನ ಸಹೋದ್ಯೋಗಿ ಚಿದಾನಂದ ಹೊಸ ಯೂನಿಫಾರ್ಮ್ ಧರಿಸಿ ಬಂದಿದ್ದೆವು. ಏನಾಗುತ್ತದೋ ಎಂಬ ಆತಂಕದಿಂದಲೇ ಅಂತ್ಯ ಸಂಸ್ಕಾರ ಕಾರ್ಯ ನಡೆಸಿದ್ದೆವು. ಅದಾದ ಬಳಿಕ ವೈರಸ್ ಭೀತಿಯಿಂದ ನಾವು ನಮ್ಮ ಹೊಸ ಸಮವಸ್ತ್ರವನ್ನೇ ಎಸೆದಿದ್ದೆವು. ಅಷ್ಟರಮಟ್ಟಿಗೆ ಭಯ ಇತ್ತು. ಆದರೆ ಸೂಕ್ತ ಮಾಹಿತಿಯನ್ನು ಪಡೆದುಕೊಂಡ ಬಳಿಕ ಯಾವುದೇ ಭಯವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಬೋಳೂರು ಸ್ಮಶಾನದಲ್ಲಿನ ಇನ್ನೋರ್ವ ಸಿಬ್ಬಂದಿ ನಾರಾಯಣ ಎಂ.
ಜನತೆ ಕೊರೋನಾ ಬಗ್ಗೆ ಭಯ ಪಡುವುದಕ್ಕಿಂತ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಶವ ಸಂಸ್ಕಾರದ ವೇಳೆ ಫೇಸ್ ಮಾಸ್ಕ್, ಪಿಪಿಇ ಕಿಟ್‌ನೊಂದಿಗೆ ಎಚ್ಚರಿಕೆಯೊಂದಿಗೆ ನಾವು ಕೆಲಸ ನಿರ್ವಹಿಸಿ ಮನೆಗೆ ತೆರಳುತ್ತೇವೆ. ಮನೆಯಲ್ಲಿಯೂ ಸಾಕಷ್ಟು ಎಚ್ಚರಿಕೆ ವಹಿಸುತ್ತೇವೆ ಎನ್ನುತ್ತಾರವರು.

ಕೊರೋನಾ ಆದಷ್ಟು ಬೇಗ ದೂರವಾಗಲಿ
ಕೋವಿಡ್ ಸೋಂಕಿತರ ಪೈಕಿ ಮೃತಪಟ್ಟ 109 ಮಂದಿಯ ಮೃತದೇಹವನ್ನು ಬೋಳೂರು ಸ್ಮಶಾನದಲ್ಲಿನ ವಿದ್ಯುತ್ ಚಿತಾಗಾರದಲ್ಲಿ ಸುಡಲಾಗಿತ್ತು. ಪ್ರತಿ ದಿನ ಕೊರೋನಾ ಸುದ್ದಿಗಳನ್ನೇ ಕೇಳಿ ನಾವೂ ಆತಂಕಿತರಾಗಿದ್ದೆವು. ಆದರೆ ಕರ್ತವ್ಯ ಮರೆಯುವಂತಿರಲಿಲ್ಲ. ಆದರೆ ಈಗ ಆ ಭಯ ಇಲ್ಲ. ಕೊರೋನಾ ಆದಷ್ಟು ಬೇಗ ದೂರವಾಗಲಿ.
 ಕೃಷ್ಣಪ್ಪ ಗೌಡ ಬೋಳೂರು

12 ಸಾವಿರ ಗಡಿ ದಾಟಿದ ಪಾಸಿಟಿವ್!
ದ.ಕ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ  12 ಸಾವಿರದ ಗಡಿ ದಾಟಿದ್ದು, 12,443ಕ್ಕೆತಲುಪಿದೆ. ಒಟ್ಟು ಸೋಂಕಿತರ ಪೈಕಿ 356 ಮಂದಿ ಸಾವನ್ನಪ್ಪಿದ್ದಾರೆ.9,422 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 2,665  ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಸಹಜ ಸ್ಥಿತಿಗೆ ಮರಳಿದ ಉಡುಪಿ ಜಿಲ್ಲೆ: ಮೋಡ-ಬಿಸಿಲ ಜುಗಲ್ ಬಂದಿ!

ಉಡುಪಿ: ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ರಭಸದಿಂದ ಕೂಡಿದ ಮಳೆಯಾಗಿದ್ದರೂ ದಿನ ಉಳಿದ ಸಮಯ...

Don't Miss

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...
error: Content is protected !!