Saturday, August 13, 2022

Latest Posts

ಕೋವಿಡ್ ಹೆಸರಿನಲ್ಲಿ ಅಧಿಕಾರಿಗಳು ಕಳ್ಳಾಟ ಆಡುವಂತಿಲ್ಲ: ಸಚಿವ ಶಿವರಾಮ ಹೆಬ್ಬಾರ್

ಕೊಪ್ಪಳ: ಕೋವಿಡ್ ಜೊತೆ ನಾವು ಹೊಂದಿಕೊಂಡು ಕೆಲಸ ಮಾಡಬೇಕಿದೆ ಆದರೆ ಕೋವಿಡ್ ಹೆಸರಿನಲ್ಲಿ ಅಧಿಕಾರಿಗಳು ಕಳ್ಳಾಟ ಆಡುವಂತಿಲ್ಲ. ಒಂದು ವೇಳೆ ಕಳ್ಳಾಟ ಆಡಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಗುರುವಾರ  ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲಾಖೆಯಲ್ಲಿ ಕೊರೋನಾ ನೆಪದಲ್ಲಿ ಕಾರ್ಮಿಕರಿಗೆ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.  ಆದರೆ  ಕಾರ್ಮಿಕರು ಯಾವುದೇ ಕೆಲಸಕ್ಕೆ ಇಲಾಖೆಗೆ ಬಂದಾಗ ಅಧಿಕಾರಿಗಳು ಕೊವಿಡ್ ನೆವೋಡ್ಡಿ ಕಳ್ಳಾಟ ಆಡುವಂತಿಲ್ಲ.  ಆದರೆ  ಈಗ ಕೋವಿಡ್ ಇದೆ ಅಂತಾ ನೆಪ ಹೇಳುವ ಕಾಲ ಮುಗಿದು ಹೋಯ್ತು, ಕೋವಿಡ್ ಜೊತೆ ನಾವು ಹೊಂದಿಕೊಂಡು ಕೆಲಸ ಮಾಡಬೇಕಿದೆ. ಕೊರೋನಾ  ನೆಪವೋಡ್ಡಿ  ಕಳ್ಳಾಟ ನಡೆಸಿದ ಅಧಿಕಾರಿಗಳ ಕಂಡು ಬಂದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಾಗುವುದು ಎಂದರು.
ಕೋವಿಡ್ ಸಂಕಷ್ಟದಲ್ಲಿ ಯಾವ ಕಾರ್ಮಿಕರು ಕೂಡ ಹಸುವಿನಿಂದ ಬಳಲುಬಾರದು ಎಂಬ ಕಾರಣಕ್ಕೆ ವಿವಿಧ ದಾನಿಗಳ ಜೋತೆಗೂಡಿ  ಇಲಾಖೆಯವ ವತಿಯಿಂದ ಊಟ ಪರಿಹಾರ ನೀಡಲಾಗಿದೆ. ಅದರಂತೆ ಕ್ಷೌರಿಕರಿಗೂ ಹಾಗೂ ಮಡಿವಾಳದವರಿಗೂ ಕೂಡ ಪರಿಹಾರ ನೀಡಲು ಸರಕಾರ ಮುಂದಾಗಿದೆ. ಇದಕ್ಕಾಗಿ ಅರ್ಜಿಗಳನ್ನು ಸ್ವೀಕರಸಲಾಗುತ್ತಿದೆ. ಆದರೆ ಇನ್ನೂ ಅವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಗಸ್ಟ್ 15ರವೆಗೆ ಅರ್ಜಿ ಸ್ವೀಕರಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಗ್ರಾಮೀಣರು ಪಿಡಿಓ ಹಾಗೂ ನಗರ,ಪಟ್ಟಣದವರು ನಗರಸಭೆಯ ಅಧಿಕಾರಿಗಳಿಂದ ಪ್ರಮಾಣ ಪತ್ರ ನೀಡಿದರೆ ಸಾಕು ಉಳಿದ ಯಾವ ದಾಖಲಾತಿ ನೀಡುವ ಅವಶ್ಯಕತೆ ಇಲ್ಲ ಎಂದರು.
ಇಲಾಖೆಯಲ್ಲಿ ಖಾಯಂ ಅಧಿಕಾರಿಗಳೇ ಇಲ್ಲ. ಇದರಿಂದ ಕಾರ್ಮಿಕರ ನೊಂದಣಿಗೆ  ತೊಂದರೆಯಾಗುತ್ತಿದೆ  ಎಂಬ ಪ್ರಶ್ನೆಗೆ  ಪ್ರತಿಕ್ರಿಯೆಯಿಸಿದ ಅವರು, ಮೊದಲಿಗೆ ಆಯಾ ಜಿಲ್ಲೆಯಲ್ಲಿ ಇಲಾಖೆಯ ಭಾಗಿಲು ತೆಗೆಯುವವರೇ ಇದ್ದಿಲ್ಲ. ಈಗ  ಕೆಲವರನ್ನು  ನೆಮಿಸಿಕೊಳ್ಳಲು ಲೋಕಸೇವಾ ಆಯೋಗಕ್ಕೆ ಮನಿವಿಸಲಾಗಿದೆ. ಶೀಘ್ರದಲ್ಲಿಯೇ ಅಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳೂತ್ತಿವೆ ಎಂದು  ಹೇಳಿದರು.
ಅದರಂತೆ ಜಿಲ್ಲೆಯಲ್ಲಿಯೂ ಸಾಕಷ್ಟು ಕಾರ್ಖಾನೆಗಳಿವೆ. ಈಗಾಗಿ ಇಲ್ಲಿ ಇಎಸ್‍ಐ ಆಸ್ಪತ್ರೆ ಬೇಡಿಕೆ ಇದೆ. ಶೀಘ್ರವಾಗಿ ಇಎಸ್‍ಐ ಆಸ್ಪತ್ರೆಗೆ ನಿರ್ಮಾಣಕ್ಕೆ ಮುಂದಾಗುತ್ತಿವೆ ಎಂದು ಭರವಸೆ ನೀಡಿದರು.
ಸಂಸದ ಸಂಗಣ್ಣ ಕರಡಿ, ಶಾಸಕಕರಾದ ಅಮರೇಗೌಡ ಬಯ್ಯಾಪೂರ, ಬಸವರಾಜ ದಡೆಸೂಗೂರು, ಜಿಲ್ಲಾಧಿಕಾರಿ ಎಸ್.ವಿಕಾಸ್  ಕಿಶೋರ್, ಜಿ.ಪಂ.ಸಿಇಓ ರಘುನಂದಮೂರ್ತಿ ಉಪಸ್ಥೀತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss